Monday , August 20 2018
ಕೇಳ್ರಪ್ಪೋ ಕೇಳಿ
Home / Film News / ಬಾಲಿವುಡ್‍ನ ಹಿರಿಯ ನಟಿ ಶ್ರೀದೇವಿ ವಿಧಿವಶ… : ದುಬೈನಲ್ಲಿ ಕೊನೆಯುಸಿರು…

ಬಾಲಿವುಡ್‍ನ ಹಿರಿಯ ನಟಿ ಶ್ರೀದೇವಿ ವಿಧಿವಶ… : ದುಬೈನಲ್ಲಿ ಕೊನೆಯುಸಿರು…

ಮುಂಬೈ : ಬಾಲಿವುಡ್‍ನ ಮೊದಲ ಸೂಪರ್‍ಸ್ಟಾರ್ ನಟಿ ಶ್ರೀದೇವಿ ಇನ್ನಿಲ್ಲ. ಇಂತಹದ್ದೊಂದು ಶಾಕಿಂಗ್ ನ್ಯೂಸ್ ಬಂದಿದೆ. ದುಬೈನಲ್ಲಿ ಶ್ರೀದೇವಿ ಕೊನೆಯುಸಿರೆಳೆದಿದ್ದಾರೆ. ತೀವ್ರ ಹೃದಯಾಘಾತದಿಂದ ಶ್ರೀದೇವಿ ಕೊನೆಯುಸಿರೆಳೆದಿದ್ದಾಗಿ ಅವರ ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ. ಶ್ರೀದೇವಿ ಅವರಿಗೆ 54 ವರ್ಷಗಳಾಗಿದ್ದವು.

ಸಂಬಂಧಿ, ನಟ ಮೋಹಿತ್ ಮರ್ವಾ ಅವರ ಮದುವೆಯಲ್ಲಿ ದುಬೈಯಲ್ಲಿ ಪಾಲ್ಗೊಂಡಿದ್ದ ಖುಷಿ ಖುಷಿಯಾಗಿಯೇ ಇದ್ದರು. ಆದರೆ, ಈ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡು ಅವರು ಕೊನೆಯುಸಿರೆಳೆದಿದಾರೆ. ಶೀದೇವಿ ಬಾಲಿವುಡ್‍ನ ಮೊದಲ ಫೀಮೇಲ್ ಸೂಪರ್‍ಸ್ಟಾರ್. ತಮಿಳುನಾಡಿನ ಶಿವಕಾಶಿಯಲ್ಲಿ 1963ರ ಆಗಸ್ಟ್ 13ರಲ್ಲಿ ಜನಿಸಿದ್ದ ಶ್ರೀದೇವಿ, 1969ರಲ್ಲಿಯೇ ಬಾಲನಟಿಯಾಗಿ ಮಲಯಾಲಂನ ಸಿನೆಮಾದಲ್ಲಿ ಬಣ್ಣ ಹಚ್ಚಿದ್ದರು. ಈ ಚಿತ್ರಕ್ಕೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಬಂದಿತ್ತು. ಹೀಗೆ ಶುರುವಾದ ಇವರ ಬಣ್ಣದ ಬದುಕು ಸೂಪರ್‍ಸ್ಟಾರ್ ಆಗುವ ತನಕ ತಲುಪಿತು. ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲಿ ಶ್ರೀದೇವಿಯ ಅವರದ್ದು ದೊಡ್ಡ ಹೆಸರು. ಹಲವು ವರ್ಷ ಬಾಲಿವುಡ್ ಲೋಕವನ್ನು ಆಳಿದ್ದ ನಟಿ ಇವರು. ಸೂಪರ್‍ಸ್ಟಾರ್‍ಗಳಾದ ಅಮಿತಾಭ್, ಕಮಲ್ ಹಾಸನ್, ರಜನಿಕಾಂತ್, ಚಿರಂಜೀವಿ ಸೇರಿದಂತೆ ಹಲವು ಘಟಾನುಘಟಿ ನಟರಿಗೆ ಶ್ರೀದೇವಿ ನೆಚ್ಚಿನ ನಟಿ. ಪದ್ಮಶ್ರೀ, ಹಲವು ಫಿಲಂ ಫೇರ್ ಪ್ರಶಸ್ತಿಗಳು ಸೇರಿದಂತೆ ವಿವಿಧ ಪ್ರಶಸ್ತಿ ಪುರಸ್ಕಾರಗಳಿಗೆ ಶ್ರೀದೇವಿ ಭಾಜನರಾಗಿದ್ದಾರೆ. ಇಂತಹ ನಟಿಯ ಸಾವು ಇದೀಗ ಎಲ್ಲರಲ್ಲೂ ನೋವು ತಂದಿದೆ. ಇಡೀ ಚಿತ್ರರಂಗವೇ ಆಘಾತಕ್ಕೊಳಗಾಗಿದೆ.

About sudina

Check Also

ಕೊನೆಗೂ ಈಡೇರಿತು ತ್ರಿಶಾ ಕಂಡಿದ್ದ ಬಹು ದಿನಗಳ ಕನಸು…

ಚೆನ್ನೈ : ಖ್ಯಾತ ನಟಿ ತ್ರಿಶಾ ಈಗ ಸಖತ್ ಖುಷಿಯಲ್ಲಿದ್ದಾರೆ. ಅವರ ಆಸೆಯೊಂದು ಕೊನೆಗೂ ಕೈಗೂಡಿದೆ… ದಕ್ಷಿಣ ಭಾರತ ಬಹುತೇಕ …

Leave a Reply

Your email address will not be published. Required fields are marked *

error: Content is protected !!