ಬೆಂಗಳೂರು : ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪಯಣ ಆರಂಭಿಸಿ ಬಾಲಿವುಡ್ನಲ್ಲಿ ಸ್ಟಾರ್ ಆಗಿ ಅರಳಿದ್ದ ನಟಿ ಶ್ರೀದೇವಿ ಕನ್ನಡದಲ್ಲೂ ಆರು ಚಿತ್ರಗಳಲ್ಲಿ ನಟಿಸಿದ್ದರು… 1974ರಲ್ಲಿ ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋಧಾ ಕೃಷ್ಣ ಚಿತ್ರಗಳಲ್ಲಿ ಶ್ರೀದೇವಿ ನಟಿಸಿದ್ದರು. ಇನ್ನು, ವರನಟ ರಾಜ್ಕುಮಾರ್ ಅಭಿನಯದ ಭಕ್ತಕುಂಬಾರ ಚಿತ್ರದಲ್ಲಿ ಸಂತ ನಾಮದೇವನ ಸಹೋದರಿಯ ಪಾತ್ರದಲ್ಲಿ ಶ್ರೀದೇವಿ ಬಣ್ಣ ಹಚ್ಚಿದ್ದರು. ಇನ್ನು, ಹೆಣ್ಣು ಸಂಸಾರದ ಕಣ್ಣು ಚಿತ್ರದಲ್ಲೂ ಶ್ರೀದೇವಿ ನಾಯಕಿ. ಇದಾದ ಬಳಿಕ ಪ್ರಿಯಾ ಎಂಬ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ಗೆ ಶ್ರೀದೇವಿ ನಾಯಕಿಯಾಗಿ ನಟಿಸಿ ಸಾಕಷ್ಟು ಮನ್ನಣೆ ಗಳಿಸಿದ್ದರು.
