Saturday , January 19 2019
ಕೇಳ್ರಪ್ಪೋ ಕೇಳಿ
Home / Film News / `ನಾವಿಬ್ಬರು ಬರೀ ಸಹನಟ ನಟಿಯರಾಗಿರಲಿಲ್ಲ… ಅದಕ್ಕಿಂತಲೂ ಮೀರಿದ ಬಾಂಧವ್ಯ ನಮ್ಮಲ್ಲಿತ್ತು…’

`ನಾವಿಬ್ಬರು ಬರೀ ಸಹನಟ ನಟಿಯರಾಗಿರಲಿಲ್ಲ… ಅದಕ್ಕಿಂತಲೂ ಮೀರಿದ ಬಾಂಧವ್ಯ ನಮ್ಮಲ್ಲಿತ್ತು…’

ಚೆನ್ನೈ : ಕಮಲ್ ಹಾಸನ್ ಮತ್ತು ದಿವಂಗತ ನಟಿ ಶ್ರೀದೇವಿ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದವರು. ಆನ್‍ಸ್ಕ್ರೀನ್‍ನ ಸಖತ್ ಸಕ್ಸಸ್‍ಫುಲ್ ಜೋಡಿ ಇದು. ಆಗ ಹೊಸದಾಗಿ ಮದುವೆಯಾದವರಿಗೆ `ನೀವು ಕಮಲ್ ಶ್ರೀದೇವಿ’ ತರ ಇರಬೇಕು ಎಂದು ಹರಸುತ್ತಿದ್ದರು. ಮತ್ತು ಹಲವರು ಇದೇ ರೀತಿ ಇರಲು ಬಯಸುತ್ತಿದ್ದರು. ಅಷ್ಟು ಫೇಮಸ್ ಈ ಜೋಡಿ. ಆದರೆ, ತೆರೆ ಮೇಲೆ ಪ್ರೇಮಿಗಳಾಗಿ ಕಾಣಿಸಿಕೊಳ್ಳುತ್ತಿದ್ದ ಕಮಲ್ ಹಾಸನ್ ಮತ್ತು ಶ್ರೀದೇವಿ ನಡುವೆ ಅದಕ್ಕೂ ಮೀರಿದ ಬಾಂಧವ್ಯ ಇತ್ತು. ಅದನ್ನು ಸ್ವತಃ ಕಮಲ್ ಹಾಸನ್ ಬಿಚ್ಚಿಟ್ಟಿದ್ದಾರೆ. ದುಬೈನಲ್ಲಿ ಮೊನ್ನೆ ಬಾತ್ ಟಬ್‍ಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಶ್ರೀದೇವಿ ಅವರ ಬಗ್ಗೆ `ಆನಂದ ವಿಕಟನ್’ ಎಂಬ ಮ್ಯಾಗಝೀನ್‍ಗೆ ಲೇಖನ ಬರೆದಿರುವ ಕಮಲ್ ಹಾಸನ್ ತನ್ನ ಮತ್ತು ಶ್ರೀದೇವಿ ನಡುವಣ ಬಾಂಧವ್ಯದ ಬಗ್ಗೆ ಬರೆದಿದ್ದಾರೆ. ನಾವು ತೆರೆ ಮೇಲೆ ಹೀರೋ ಹಿರೋಯಿನ್‍ಗಳಾಗಿ ಕಂಡರೂ ನಾವಿಬ್ಬರು ಅಪ್ಪಟ ಅಣ್ಣ ತಂಗಿಯಂತೆ ಇದ್ದೆವು. ನಮ್ಮಿಬ್ಬರ ನಡುವೆ ಅಂತಹ ಪವಿತ್ರ ಬಾಂಧವ್ಯ ಇತ್ತು. ಈ ಬಾಂಧವ್ಯ ಕೊನೆ ತನಕವೂ ಇತ್ತು ಎಂದು ಬರೆದುಕೊಂಡಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!