Monday , September 24 2018
ಕೇಳ್ರಪ್ಪೋ ಕೇಳಿ
Home / Film News / ಮತ್ತೆ ರಗಡ್ ಲುಕ್‍ನಲ್ಲಿ ಸೂಪರ್‍ಸ್ಟಾರ್ : ರಜನಿ ಕಾಲ ಟೀಸರ್ ಔಟ್

ಮತ್ತೆ ರಗಡ್ ಲುಕ್‍ನಲ್ಲಿ ಸೂಪರ್‍ಸ್ಟಾರ್ : ರಜನಿ ಕಾಲ ಟೀಸರ್ ಔಟ್

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ಮತ್ತೆ ಹವಾ ಸೃಷ್ಟಿಸಿದ್ದಾರೆ. ಮತ್ತೆ ರಗಡ್ ಲುಕ್‍ನಲ್ಲಿ ರಜನಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ರಜನಿ ಅಭಿನಯದ ಬಹುನಿರೀಕ್ಷಿತ ಕಾಲ ಚಿತ್ರದ ಟೀಸರ್ ರಿಲೀಸ್ ಆಗಿದೆ.


ಕಬಾಲಿ ಚಿತ್ರದ ಬಳಿಕ ರಜನಿ ಅಬಿನಯದ ಕಾಲ ಬಹುನಿರೀಕ್ಷೆ ಮೂಡಿಸಿತ್ತು. ಈ ಕಾಲ ಚಿತ್ರದ ನಿರ್ದೇಶಿಸುತ್ತಿರುವವರು ಕಬಾಲಿ ಡೈರೆಕ್ಟರ್ ಪಾ ರಂಜಿತ್. ಹೀಗಾಗಿ, ಸಹಜವಾಗಿಯೇ ಚಿತ್ರ ನಿರೀಕ್ಷೆ ಮೂಡಿಸಿದ್ದು, ಕಾಲ ಚಿತ್ರದಲ್ಲೂ ಕಬಾಲಿ ಶೇಡ್ ಕಾಣ್ತಿದೆ.
ತಲೈವಾ ಗ್ಯಾಂಗ್‍ಸ್ಟಾರ್ ಕಾಲ ಕರಿಕಾಲನ್ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದ ವಿಲನ್ ಗೆಟಪ್‍ನಲ್ಲಿ ನಾನಾ ಪಾಟೇಕರ್ ಕಾಣಿಸಿಕೊಂಡಿದ್ದಾರೆ. ತಮಿಳುನಾಡಿನ ಕಾಲ ಮುಂಬೈನ ಧಾರಾವಿಗೆ ಹೋಗಿ ಹೇಗೆ ಡಾನ್ ಆಗ್ತಾನೆ ಅನ್ನೋದೇ ಚಿತ್ರದ ಥೀಮ್.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!