Monday , February 18 2019
ಕೇಳ್ರಪ್ಪೋ ಕೇಳಿ
Home / Film News / ಝೀರೋ ಸೆಟ್‍ನಲ್ಲಿ ಕತ್ರಿನಾ ರಾಯಲ್ ಲುಕ್…

ಝೀರೋ ಸೆಟ್‍ನಲ್ಲಿ ಕತ್ರಿನಾ ರಾಯಲ್ ಲುಕ್…

ಮುಂಬೈ : ಕತ್ರಿನಾ ಕೈಫ್ ರಾಯಲ್ ಲುಕ್‍ನಲ್ಲಿ ಮಿಂಚಿದ್ದಾರೆ. ಶಾರೂಖ್ ಖಾನ್ ಅಭಿನಯದ `ಝೀರೋ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿ ಇರುವ ಕತ್ರಿನಾ ಶೂಟಿಂಗ್ ಸ್ಪಾಟ್‍ನ ಒಂದಷ್ಟು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಟ್ರೆಡಿಷನಲ್ ಡ್ರೆಸ್‍ನಲ್ಲಿ ಮಿಂಚಿರುವ ಕತ್ರಿನಾ ತುಂಬಾ ಆಭರಣ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ज़ीरो the 🎥 #zerothefilm मुंबई फ़िल्मcity

A post shared by Katrina Kaif (@katrinakaif) on


ಇದಷ್ಟೇ ಅಲ್ಲದೆ, ಶೂಟಿಂಗ್ ಸ್ಪಾಟ್‍ನ ಇನ್ನೊಂದಷ್ಟು ಇಂಟ್ರೆಸ್ಟಿಂಗ್ ಫೋಟೋಗಳನ್ನು ಕತ್ರಿನಾ ತಮ್ಮ ಇನ್ಸ್ಟ್ರ್ರಾಗ್ರಾಮ್‍ಗೆ ಅಪ್‍ಲೋಡ್ ಮಾಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳೂ ಮೆಚ್ಚಿದ್ದು, ಕಮೆಂಟ್, ಲೈಕ್ಸ್‍ಗಳು ಬರುತ್ತಿವೆ…

📸by meeeeee ✨

A post shared by Katrina Kaif (@katrinakaif) on


`ಝೀರೋ’ ಚಿತ್ರದ ಮೂಲಕ `ಜಬ್ ತಕ್ ಹೇ ಜಾನ್’ ಚಿತ್ರದ ಟೀಮ್ ಮತ್ತೆ ಒಂದಾಗಿದೆ. ಈ ಚಿತ್ರದಲ್ಲೂ ಶಾರೂಖ್ ಜೊತೆ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ನಟಿಸಿದ್ದರು. ಈ ಚಿತ್ರದಲ್ಲಿ ಶಾರೂಖ್ ತುಂಬಾ ಡಿಫ್ರೆಂಟ್ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಕುಬ್ಜನ ಪಾತ್ರವನ್ನು ಶಾರೂಖ್ ಇಲ್ಲಿ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ಶಾರೂಖ್ ಪತ್ನಿ ಗೌರಿ ಖಾನ್ ನಿರ್ಮಿಸುತ್ತಿದ್ದು, 2018ರ ಡಿಸೆಂಬರ್ 21ಕ್ಕೆ ತೆರೆಗೆ ಬರಲಿದೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!