Monday , September 24 2018
ಕೇಳ್ರಪ್ಪೋ ಕೇಳಿ
Home / Film News / 61 ವರ್ಷ ಹಿಂದಿನ ಸೀರೆಯುಟ್ಟು ಪ್ರಶಸ್ತಿ ಸ್ವೀಕರಿಸಿದ ರಶ್ಮಿಕಾ…!

61 ವರ್ಷ ಹಿಂದಿನ ಸೀರೆಯುಟ್ಟು ಪ್ರಶಸ್ತಿ ಸ್ವೀಕರಿಸಿದ ರಶ್ಮಿಕಾ…!

ಬೆಂಗಳೂರು : ಕಿರಿಕ್ ಪಾರ್ಟಿ ಸುಂದರಿ ರಶ್ಮಿಕಾ ಮಂದಣ್ಣ ಈಗ ಖುಷಿಯಲ್ಲಿದ್ದಾರೆ. ಚಿತ್ರರಂಗದಲ್ಲಿ ಸಾಧನೆಯ ಮೆಟ್ಟಿಲೇರುತ್ತಿರುವ ಈ ಕೊಡಗಿನ ಕುವರಿ ಇತ್ತೀಚೆಗಷ್ಟೇ ಬೆಂಗಳೂರು ಟೈಮ್ಸ್‍ನ `ಮೋಸ್ಟ್ ಡಿಸೈರೆಬಲ್ ವುಮೆನ್’ ಪ್ರಶಸ್ತಿಯನ್ನು ಪಡೆದು ಬೀಗಿದ್ದರು. ಈಗ ಕನ್ನಡದ ಮನೋರಂಜನಾ ವಾಹಿನಿ ಝೀ ಕನ್ನಡದ `ಹೆಮ್ಮೆಯ ಕನ್ನಡಿಗ’ ಪ್ರಶಸ್ತಿಯನ್ನು ರಶ್ಮಿಕಾ ಮುಡಿಗೇರಿಸಿಕೊಂಡಿದ್ದಾರೆ. ಈ ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ರಶ್ಮಿಕಾ ಅಪ್ಪಟ ಕೊಡವತಿಯಂತೆ ಸೀರೆಯುಟ್ಟು ಮಿರಮಿರ ಮಿಂಚುತ್ತಿದ್ದರು. ಆದರೆ, ರಶ್ಮಿಕಾ ತೊಟ್ಟಿದ್ದ ಈ ಕೆಂಪು ಸೇರಿ ಮಂದಣ್ಣ ಪಾಲಿಗೆ ಬರೀ ಸೀರೆಯಲ್ಲ… ಅದೊಂದು ಭಾವನಾತ್ಮಕ ಬೆಸುಗೆ… ಯಾಕೆಂದರೆ, ಈ ಸೀರೆಗೆ ಅದರದ್ದೇ ಹಿನ್ನೆಲೆ ಮತ್ತು ಮಹತ್ವ ಇದೆ…

61 ವರ್ಷ ಹಿಂದಿನ ಸೀರೆ…! : ರಶ್ಮಿಕಾ ತೊಟ್ಟಿದ್ದ ಈ ಕೆಂಬಣ್ಣದ ಸೀರೆ ಈಗಿನದ್ದಲ್ಲ… ಅದಕ್ಕೆ 61 ವರ್ಷವಾಗಿದೆ. ರಶ್ಮಿಕಾ ಅಜ್ಜಿ ತನ್ನ ಮದುವೆಯ ಸಂದರ್ಭದಲ್ಲಿ ಉಟ್ಟಿದ್ದ ಸೀರೆಇದು. ಇದಾದ ಬಳಿಕ ಈ ಸೀರೆ ರಶ್ಮಿಕಾ ತಾಯಿಗೆ ಬಂದಿದೆ. ತಾಯಿ ಬಳಿಕ ಮಗಳು ರಶ್ಮಿಕಾ ಬಳಿ ಈ ಸೀರೆ ಇದೆ…! ಈ ಸೀರೆಯ ಬಗ್ಗೆ ರಶ್ಮಿಕಾ ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ, ಈ ಸೀರೆಯಿಂದ ನನಗೆ ಸದಾ ಒಳಿತಾಗಿದೆ ಎಂದೂ ಹೇಳಿಕೊಂಡಿದ್ದಾರೆ. ಅಜ್ಜಿ ತುಂಬಾ ಧೈರ್ಯವಂತ ಮಹಿಳೆ. ಅವರೇ ನನಗೆ ಸ್ಫೂರ್ತಿ ಎಂಬುದು ರಶ್ಮಿಕಾ ಖುಷಿಯ ಮಾತು.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!