Tuesday , April 23 2019
ಕೇಳ್ರಪ್ಪೋ ಕೇಳಿ
Home / Film News / ಅವಳಿ ಗಂಡು ಮಕ್ಕಳಿಗೆ ತಾಯಿಯಾದ ಸನ್ನಿ ಲಿಯೋನ್…

ಅವಳಿ ಗಂಡು ಮಕ್ಕಳಿಗೆ ತಾಯಿಯಾದ ಸನ್ನಿ ಲಿಯೋನ್…

ಮುಂಬೈ : ನೀಲಿ ಚಿತ್ರಗಳ ಮಾಜಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ತಾಯಿಯಾಗಿದ್ದಾರೆ. ಈಗಾಗಲೇ ಒಂದು ಹೆಣ್ಮಗುವನ್ನು ದತ್ತು ಪಡೆದಿರುವ ಸನ್ನಿ ದಂಪತಿ ಈಗ ಅವಳಿ ಗಂಡು ಮಕ್ಕಳಿಗೆ ತಂದೆ ತಾಯಿ ಆಗುತ್ತಿದ್ದಾರೆ. ಬಾಡಿಗೆ ತಾಯಿಯ ಮೂಲಕ ದಂಪತಿ ಅವಳಿ ಗಂಡು ಮಕ್ಕಳನ್ನು ಪಡೆದಿದ್ದಾರೆ.


ಹೀಗಾಗಿ, ಸನ್ನಿ ಕುಟುಂಬದಲ್ಲಿ ಈಗ ಒಟ್ಟು ಐದು ಮಂದಿ ಆಗಿದ್ದಾರೆ. ನವಜಾತ ಗಂಡು ಮಕ್ಕಳಿಗೆ ನೋಹಾ ಮತ್ತು ಅಸೇರ್ ಎಂದು ಹೆಸರಿಟ್ಟಿದ್ದು, ಮೂವರು ಮಕ್ಕಳೊಂದಿಗೆ ಸನ್ನಿ ದಂಪತಿ ಖುಷಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.ಕಳೆದ ವರ್ಷದ ಜೂನ್‍ನಲ್ಲಿ ಸನ್ನಿ ದಂಪತಿ ನಿಶಾ ಎಂಬ ಹೆಣ್ಮಗುವನ್ನು ದತ್ತು ಪಡೆದಿದ್ದರು. ಈಗ ಈ ನಿಶಾಗೆ ಹೊಸ ತಮ್ಮಂದಿರು ಬಂದಿದ್ದಾರೆ.

About sudina

Check Also

ಬಾಂಬ್ ಬ್ಲಾಸ್ಟ್ ಆದ ಹೊಟೇಲ್‍ನಲ್ಲೇ ಇದ್ದರು ಈ ಖ್ಯಾತ ನಟಿ…!

ಕೊಲೊಂಬೋ : ಶ್ರೀಲಂಕಾದಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ… ಮೂರು ಪವಿತ್ರ ಚರ್ಚ್‍ಗಳು ಹಾಗೂ ಮೂರು ಫೈವ್ ಸ್ಟಾರ್ ಹೊಟೇಲ್‍ನಲ್ಲಿ …

Leave a Reply

Your email address will not be published. Required fields are marked *

error: Content is protected !!