Monday , June 25 2018
ಕೇಳ್ರಪ್ಪೋ ಕೇಳಿ
Home / Film News / ಕೆಪಿಜೆಪಿಗೆ ಉಪ್ಪಿ ಗುಡ್ ಬೈ: ಹೊಸ ಪಕ್ಷ ಸ್ಥಾಪನೆಯ ಇಂಗಿತ

ಕೆಪಿಜೆಪಿಗೆ ಉಪ್ಪಿ ಗುಡ್ ಬೈ: ಹೊಸ ಪಕ್ಷ ಸ್ಥಾಪನೆಯ ಇಂಗಿತ

ಬೆಂಗಳೂರು : ಕೆಪಿಜೆಪಿ ಭಿನ್ನಮತ ಬೇರೊಂದು ಘಟ್ಟ ತಲುಪಿದೆ. ನಟ ಉಪೇಂದ್ರ ಪಕ್ಷದಿಂದ ಹೊರ ಬಂದಿದ್ದಾರೆ. ಜೊತೆಗೆ ಹೊಸ ಪಕ್ಷ ಸ್ಥಾಪನೆ ಇಂಗಿತ ವ್ಯಕ್ತಪಡಿಸಿದ್ದಾರೆ. ಮಹೇಶ್ ಗೌಡ ಜೊತೆಗಿನ ಭಿನ್ನಮತದಿಂದ ಪಕ್ಷ ತ್ಯಜಿಸಿದ ಉಪ್ಪಿ ಈ ಬಾರಿ ಹೊಸ ಪಕ್ಷ ಸ್ಥಾಪನೆ ಆಗದಿದ್ದರೆ ಪ್ರಜಾಕೀಯ ಪರಿಕಲ್ಪನೆಯಲ್ಲೇ ಸ್ವತಂತ್ರ್ಯವಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.

ಇನ್ನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಉಪೇಂದ್ರ ನಂಬಿದ ತತ್ವ ಸಿದ್ಧಾಂತಕ್ಕೆ ಸರಿಯಾಗಿಯೇ ಚುನಾವಣೆ ಎದುರಿಸುವುದಾಗಿ ಹೇಳಿದ್ದಾರೆ. ಇನ್ನು ಸದ್ಯ ಎಲ್ಲಾ ಸಮಸ್ಯೆ ಪರಿಹಾರವಾಗಿದ್ದು, ಇನ್ನು ಮುಂದೆ ಇಂತಹ ಸಮಸ್ಯೆ ಎದುರಾಗುವುದಿಲ್ಲ ಎಂದು ಉಪೇಂದ್ರ ಪತ್ನಿ ಪ್ರಿಯಾಂಕಾ ಹೇಳಿದ್ದಾರೆ. ಜೊತೆಗೆ ಬಹುತೇಕ ಟಿಕೆಟ್ ಆಕಾಂಕ್ಷಿಗಳು ಉಪ್ಪಿ ಬೆಂಬಲಕ್ಕೆ ನಿಂತಿದ್ದು, ಉಪ್ಪಿಯ ನಿರ್ಧಾರಕ್ಕೆ ಬದ್ಧ ಅಂತ ನಟಿ ರೂಪಾ ಅಯ್ಯರ್ ಹೇಳಿದ್ದಾರೆ.

 

About sudina

Check Also

ತಣ್ಣಗಾಗದ `ಬಾಸ್’ ವಿವಾದ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ `ಬಾಸ್’ ಯಾರು…? ಹೀಗೊಂದು ಪ್ರಶ್ನೆಗೆ ಒಬ್ಬೊಬ್ಬ ನಟರ ಅಭಿಮಾನಿಗಳದ್ದೂ ಒಂದೊಂದು ಉತ್ತರ… ಚಾಲೆಂಜಿಂಗ್ ಸ್ಟಾರ್ ದರ್ಶನ್ …

Leave a Reply

Your email address will not be published. Required fields are marked *

error: Content is protected !!