Tuesday , May 22 2018
Home / Film News / ನೆಚ್ಚಿನ ನಟನ ಹೆಸರಿಗೆ ತನ್ನೆಲ್ಲಾ ಆಸ್ತಿ ಬರೆದಿಟ್ಟು ಕೊನೆಯುಸಿರೆಳೆದ ಅಭಿಮಾನಿ…!

ನೆಚ್ಚಿನ ನಟನ ಹೆಸರಿಗೆ ತನ್ನೆಲ್ಲಾ ಆಸ್ತಿ ಬರೆದಿಟ್ಟು ಕೊನೆಯುಸಿರೆಳೆದ ಅಭಿಮಾನಿ…!

ಮುಂಬೈ : ಸಿನೆಮಾ ಸ್ಟಾರ್‍ಗಳ ಅಭಿಮಾನಿಗಳು ತಮ್ಮ ಅಭಿಮಾನವನ್ನು ಬೇರೆ ಬೇರೆ ರೀತಿ ವ್ಯಕ್ತಪಡಿಸುತ್ತಾರೆ… ಮಕ್ಕಳಿಗೆ ಹೆಸರಿಟ್ಟು, ತನ್ನ ಕೈಯಲ್ಲಿ ಹಚ್ಚೆ ಹಾಕಿಕೊಂಡು ಅಥವಾ ಊರಿನ ರಸ್ತೆಗೆ ಹೆಸರಿಟ್ಟು, ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿ ಅಭಿಮಾನಿಗಳು ತಮ್ಮ ಪ್ರೀತಿ ಗೌರವವನ್ನು ಸಾರುತ್ತಾರೆ. ಆದರೆ, ಇಲ್ಲೊಬ್ಬರು ಅಭಿಮಾನಿ ತುಂಬಾ ಡಿಫ್ರೆಂಟ್… ಇವರು ತನ್ನೆಲ್ಲಾ ಆಸ್ತಿಯನ್ನು ತಾನು ಮೆಚ್ಚುವ ನಟನ ಹೆಸರಿಗೆ ಬರೆದಿಟ್ಟು ಕೊನೆಯುಸಿರೆಳೆದಿದ್ದಾರೆ. ಇಂತಹ ದೊಡ್ಡ ಅಭಿಮಾನಿಯನ್ನು ಪಡೆದವರು ಬಾಲಿವುಡ್ ನಟ ಸಂಜಯ್ ದತ್… ಮಲಬಾರ್ ಹಿಲ್ಸ್‍ನಲ್ಲಿ ನೆಲೆಸುತ್ತಿದ್ದ 62 ವರ್ಷದ ನಿಶಿ ಹರಿಶ್ಚಂದ್ರ ತ್ರಿಪಾಠಿ ತನ್ನೆಲ್ಲಾ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಬರೆದಿಟ್ಟಿದ್ದಾರೆ. ಕೋಲ್ಕತ್ತಾದಲ್ಲಿ ಶೂಟಿಂಗ್‍ನಲ್ಲಿ ಇದ್ದ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡಾದ ಅಧಿಕಾರಿಗಳು ಮತ್ತು ವಕೀಲರು ಸಂಜಯ್ ದತ್‍ಗೆ ಈ ವಿಷಯ ತಿಳಿಸಿದ್ದರು. ಈ ವಿಷಯ ಕೇಳಿ ಸಂಜೂ ಕೂಡಾ ಒಂದು ಕ್ಷಣ ಶಾಕ್ ಆಗಿದ್ದರು. ಜೊತೆಗೆ, ಅಭಿಮಾನಿಯ ಪ್ರೀತಿಗೆ ಕರಗಿದ್ದರು. ನಿಶಿ ಅವರು ಸಂಜಯ್ ಅವರು ಕಟ್ಟರ್ ಅಭಿಮಾನಿ. ಹೀಗಾಗಿ, ಎಲ್ಲದಕ್ಕೂ ನಾಮಿನಿಯಾಗಿ ಸಂಜಯ್ ಅವರ ಹೆಸರನ್ನೇ ಇವರು ಹಾಕಿದ್ದರು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಿಶಿ ಜನವರಿ 15 ರಂದು ಇವರು ಕೊನೆಯುಸಿರೆಳೆದಿದ್ದರು. ಇನ್ನು, ಈ ಆಸ್ತಿ ವಿಚಾರ ಗೊತ್ತಾಗುತ್ತಿದ್ದಂತೆಯೇ ಸಂಜಯ್ ದತ್ ನಿಶಿ ಅವರ ಕುಟುಂಬದವರೊಂದಿಗೆ ಮಾತನಾಡಿದ್ದಾರೆ. ಜೊತೆಗೆ, ತಮ್ಮ ಒಪ್ಪಿಗೆಯಂತೆ ಎಲ್ಲಾ ಆಸ್ತಿಯನ್ನು ನಿಶಿ ಕುಟುಂಬಸ್ಥರಿಗೇ ಮರಳಿಸಿದ್ದಾರೆ. ಈ ಬಗೆಗಿನ ಕಾನೂನು ಪ್ರಕ್ರಿಯೆಗಳು ಈಗ ನಡೆಯುತ್ತಿದೆ..

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!