Wednesday , March 21 2018
Home / Film News / ಮತ್ತೆ ಬಂದರು ಸಿಂಧು ಲೋಕನಾಥ್…

ಮತ್ತೆ ಬಂದರು ಸಿಂಧು ಲೋಕನಾಥ್…

ಬೆಂಗಳೂರು : ಸ್ಯಾಂಡಲ್‍ವುಡ್ ನಟಿ ಸಿಂಧು ಲೋಕನಾಥ್ ಮತ್ತೆ ತೆರೆಗೆ ಬರುತ್ತಿದ್ದಾರೆ. ಕಳೆದ ವರ್ಷ ಸದ್ದಿಲ್ಲದೆ ಮದುವೆ ಮಾಡಿಕೊಂಡಿದ್ದ ಸಿಂಧು ಲೋಕನಾಥ್ ಬಳಿಕ ಸಿನಿ ಪರದೆ ಮೇಲೆ ಕಾಣಿಸಿಕೊಂಡೇ ಇರಲಿಲ್ಲ. ಬಹುತೇಕ ಎಲ್ಲರೂ ಸಿಂಧು ನಟಿಸುವುದನ್ನು ನಿಲ್ಲಿಸಿದ್ದಾರೆ ಎಂದೇ ಮಾತನಾಡಿಕೊಳ್ಳುತ್ತಿದ್ದರು. 2015ರಲ್ಲಿ ಸಿದ್ಧವಾಗಿದ್ದ `ರಾಕ್ಷಸಿ’ ಚಿತ್ರವೇ ಸಿಂಧು ಅಭಿನಯದ ಕಡೆಯ ಚಿತ್ರ. ಇದಾದ ಬಳಿಕ ಲಾಂಗ್ ಗ್ಯಾಪ್ ಬಳಿಕ ಸಿಂಧು ಮತ್ತೆ ಸಿನಿಲೋಕದಲ್ಲಿ ಸಕ್ರಿಯರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿಂಧು ಅಭಿನಯದ ಕೆಲವೊಂದು ಚಿತ್ರ ರಿಲೀಸ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು, 2015ರ ರಾಕ್ಷಸಿ ಚಿತ್ರವೂ ಈ ವಾರ ರೀರಿಲೀಸ್ ಆಗುತ್ತಿದೆ. ಇದಲ್ಲದೆ, ಮಲಯಾಲಂನ ಒಂದು ಸಿನೆಮಾ ಹಾಗೂ ತುಳು ಚಿತ್ರದ ಅಂಬರ್ ಕ್ಯಾಟರಸ್ ಚಿತ್ರದಲ್ಲೂ ಸಿಂಧು ಅಭಿನಯಿಸಿದ್ದು, ರಿಲೀಸ್‍ಗಾಗಿ ಕಾಯುತ್ತಿದೆ..

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!