Monday , January 21 2019
ಕೇಳ್ರಪ್ಪೋ ಕೇಳಿ
Home / Film News / `ಅಪ್ಪೆ ಟೀಚರ್’ ರಿಲೀಸ್‍ಗೆ ಮುಹೂರ್ತ ಫಿಕ್ಸ್

`ಅಪ್ಪೆ ಟೀಚರ್’ ರಿಲೀಸ್‍ಗೆ ಮುಹೂರ್ತ ಫಿಕ್ಸ್

ಮಂಗಳೂರು : ಕೋಸ್ಟಲ್‍ವುಡ್‍ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ `ಅಪ್ಪೆ ಟೀಚರ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಮಾರ್ಚ್ 23ಕ್ಕೆ ಈ ಚಿತ್ರ ತೆರೆ ಕಾಣಲಿದೆ. ಕಿಶೋರ್ ಮೂಡಬಿದಿರೆ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಕೋಸ್ಟಲ್‍ವುಡ್‍ನ ಪ್ರಮುಖ ಕಲಾವಿದರೆಲ್ಲಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರ ತನ್ನ 360 ಡಿಗ್ರಿ ಪೋಸ್ಟರ್ ಮೂಲಕವೂ ಗಮನ ಸೆಳೆದಿದೆ.

ಒಂದು ಸುವರ್ಣಾವಕಾಶ : ಇನ್ನು, ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಉತ್ಸಾಹಿಗಳನ್ನು ಆಹ್ವಾನಿಸಿದೆ. ಚಿತ್ರದ ಪ್ರಚಾರದಲ್ಲಿ ಆಸಕ್ತಿ ಇರುವವರು ಚಿತ್ರತಂಡವನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಜೊತೆಗೆ ಆಕರ್ಷಕ ವೇತನವನ್ನೂ ನೀಡುವುದಾಗಿ ಚಿತ್ರತಂಡ ಘೋಷಿಸಿಕೊಂಡಿದೆ. ಬಣ್ಣದ ಲೋಕದಲ್ಲಿ ತೊಡಗಿಕೊಳ್ಳಬೇಕು ಎನ್ನುವ ಉತ್ಸಾಹಿಗಳಿಗೆ ಇದೂ ಒಂದು ಸುವರ್ಣಾವಕಾಶವಾಗಿದೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!