Saturday , December 15 2018
ಕೇಳ್ರಪ್ಪೋ ಕೇಳಿ
Home / Film News / ಕಾಜೋಲ್‍ರನ್ನು ಅಜಯ್ ದೇವಗನ್ ಮದುವೆಯಾಗಿದ್ದು ಎಲ್ಲಿ ಗೊತ್ತಾ…? : ನೀವು ಊಹಿಸಿಯೇ ಇರಲಿಕ್ಕಿಲ್ಲ…!

ಕಾಜೋಲ್‍ರನ್ನು ಅಜಯ್ ದೇವಗನ್ ಮದುವೆಯಾಗಿದ್ದು ಎಲ್ಲಿ ಗೊತ್ತಾ…? : ನೀವು ಊಹಿಸಿಯೇ ಇರಲಿಕ್ಕಿಲ್ಲ…!

ಮುಂಬೈ : ಕೃಷ್ಣಸುಂದರಿ ಕಾಜೋಲ್ ಮತ್ತು ಅಜಯ್ ದೇವಗನ್ ಬಾಲಿವುಡ್‍ನ ಆದರ್ಶ ದಂಪತಿ. ಇವರ ದಾಂಪತ್ಯ ಸಿನಿರಂಗದ ಹಲವು ಜೋಡಿಗೆ ಮಾದರಿ. 1999ರಲ್ಲಿ ಅಜಯ್ ಕಾಜೋಲ್‍ರನ್ನು ಮದುವೆಯಾಗಿದ್ದರು. ಸರಿಸುಮಾರು ಎರಡು ದಶಕಗಳ ಬಳಿಕ ಅಜಯ್ ತಮ್ಮ ದಾಂಪತ್ಯದ ಬಗೆಗಿನ ಅಪರೂಪದ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ.. ಕಾರ್ಯಕ್ರಮವೊಂದರಲ್ಲಿ ಅಜಯ್ ಮತ್ತು ಕಾಜೋಲ್ ಪ್ರೀತಿಯ ವಿಚಾರ ಪ್ರಸ್ತಾಪವಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಅಜಯ್ ತಮ್ಮ ಮದುವೆಯಾದ ಜಾಗವನ್ನು ತಿಳಿಸಿ ಎಲ್ಲರನ್ನೂ ಒಮ್ಮೆ ಹುಬ್ಬೇರಿಸುವಂತೆ ಮಾಡಿದ್ದರು…!

ಅಜಯ್ ಹೇಳಿದ್ದೇನು…? : `ಸಿನೆಮಾ ಶೂಟಿಂಗ್ ಸೆಟ್‍ನಲ್ಲಿ ಮೊದಲು ಭೇಟಿಯಾಗಿದ್ದೇವು. ಆರಂಭದಲ್ಲಿ ಸ್ವಲ್ಪ ಸ್ವಲ್ಪ ಮಾತನಾಡುತ್ತಿದ್ದೇವು. ಬಳಿಕ ನಾವಿಬ್ಬರು ತುಂಬಾ ಮಾತಾಡೋದಕ್ಕೆ ಆರಂಭಿಸಿದ್ದೇವು. ಹೀಗೆ ನಮ್ಮ ಸಂಬಂಧ ಆರಂಭವಾಯ್ತು.. ಮೊದಲು ಸ್ನೇಹಿತರಾಗಿದ್ದೇವು. ಬಳಿಕ ಪ್ರೇಮಿಗಳಾದೆವು. ಒಂದು ದಿನ ನಾವಿಬ್ಬರು ಮದುವೆಯಾಗೋಣ ಅಂತ ನಿರ್ಧರಿಸಿದ್ದೇವು. ನನಗೆ ನಮ್ಮ ಮದುವೆ ಸುದ್ದಿಯನ್ನು ದೊಡ್ಡದಾಗಿ ಮಾಡುವುದು ಇಷ್ಟ ಇರಲಿಲ್ಲ. ಸರಳವಾಗಿಯೇ ಮದುವೆಯಾಗುವ ಆಸೆ ನನ್ನದಾಗಿತ್ತು. ಹೀಗಾಗಿ, ನನ್ನ ಮನೆಯ ಟೆರೇಸ್ ಮೇಲೆ ನಾವಿಬ್ಬರು ಮದುವೆಯಾದೆವು…’ ಅಂತ ಅಜಯ್ ಹೇಳಿಕೊಂಡಿದ್ದಾರೆ… ಸಂಪ್ರದಾಯಬದ್ಧವಾಗಿಯೇ ನಡೆದ ಈ ವಿವಾಹ ಸಮಾರಂಭದಲ್ಲಿ ಕೆಲವೇ ಕೆಲವು ಸ್ನೇಹಿತರು ಹಾಗೂ ಸಂಬಂಧಿಕರು ಪಾಲ್ಗೊಂಡಿದ್ದರು..

ಇನ್ನು, ಇದಕ್ಕೂ ಮೊದ್ಲು ಕಾರ್ಯಕ್ರಮವೊಂದರಲ್ಲಿ ತಮ್ಮ ದಾಂಪತ್ಯದ ಯಶಸ್ಸಿನ ಬಗ್ಗೆ ಮಾತನಾಡಿದ್ದ ಕಾಜೋಲ್ `ನಾನು ಹೆಚ್ಚು ಮಾತನಾಡುತ್ತೇನೆ. ಅಜಯ್ ನನ್ನ ಮಾತು ಕೇಳುತ್ತಾರೆ. ಕಮ್ಮಿ ಮಾತನಾಡುತ್ತಾರೆ’ ಎಂದು ಹೇಳಿದ್ದರು. ಜೊತೆಗೆ, ನಾವಿಬ್ಬರು ಈಗಲೂ ಸ್ನೇಹಿತರೇ… ಇದೇ ನಮ್ಮ ದಾಂಪತ್ಯದ ಯಶಸ್ಸಿನ ಗುಟ್ಟು ಎಂದು ಕಾಜೋಲ್ ಹೇಳಿಕೊಂಡಿದ್ದಾರೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!