Saturday , February 16 2019
ಕೇಳ್ರಪ್ಪೋ ಕೇಳಿ
Home / Film News / ದಕ್ಷಿಣ ಭಾರತದ ಖ್ಯಾತ ನಟನಿಗೆ ಕಪಾಳಮೋಕ್ಷ ಮಾಡಿದ್ದ ರಾಧಿಕಾ…!

ದಕ್ಷಿಣ ಭಾರತದ ಖ್ಯಾತ ನಟನಿಗೆ ಕಪಾಳಮೋಕ್ಷ ಮಾಡಿದ್ದ ರಾಧಿಕಾ…!

ಮುಂಬೈ : ನಟಿ ರಾಧಿಕಾ ಆಪ್ಟೆ ತನ್ನ ಬದುಕಿನಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ. ಅದು ತನ್ನೊಂದಿಗೆ ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ಮಾಡಿದ ಅಸಭ್ಯ ವರ್ತನೆಯ ಘಟನೆ… ಈ ಘಟನೆಯನ್ನು ರಾಧಿಕಾ ನೆನಪು ಮಾಡಿಕೊಂಡಿದ್ದು ನಟಿ ನೇಹಾ ದೂಪಿಯಾ ನಡೆಸಿಕೊಡುವ ಚಾಟ್ ಶೋನಲ್ಲಿ… ಈ ಸಂದರ್ಭದಲ್ಲಿ ತನ್ನ ಬದುಕಿನ ಕೆಲ ವಿಷಯಗಳ ಬಗ್ಗೆ ಬಿಚ್ಚಿಟ್ಟ ರಾಧಿಕಾ ಬಳಿಕ ತಾನು ದಕ್ಷಿಣ ಭಾರತದ ಖ್ಯಾತ ನಟನಿಗೆ ಕಪಾಳ ಮೋಕ್ಷ ಮಾಡಿದ ಘಟನೆಯನ್ನೂ ಹೇಳಿಕೊಂಡಿದ್ದಾರೆ.

`ಅದು ತಮಿಳು ಚಿತ್ರವೊಂದರ ಶೂಟಿಂಗ್ ಸಂದರ್ಭ. ನಾನು ಮೊದಲ ದಿನ ಶೂಟಿಂಗ್ ಸ್ಪಾಟ್‍ಗೆ ಹೋಗಿದ್ದೆ. ಆಗ ಖ್ಯಾತ ನಟರೊಬ್ಬರು ತನ್ನ ಕಾಲಿಗೆ ಕಚಗುಳಿ ಇಡಲು ಆರಂಭಿಸಿದರು. ಹೀಗೆ ಮಾಡದಂತೆ ಹಲವು ಸಲ ಹೇಳಿಕೊಂಡೆ. ಆದರೆ, ಆ ನಟ ತನ್ನ ವರ್ತನೆಯನ್ನು ನಿಲ್ಲಿಸದ ಕಾರಣ ನಾನು ಅವರ ಕಪಾಳಕ್ಕೆ ಹೊಡೆದಿದ್ದೆ’ ರಾಧಿಕಾ ಹೇಳಿಕೊಂಡಿದ್ದಾರೆ. ಇದಲ್ಲದೆ, ಇನ್ನೂ ಅನೇಕ ವಿಷಯಗಳ ಕುರಿತು ರಾಧಿಕಾ ಮಾತನಾಡಿಕೊಂಡಿದ್ದಾರೆ. ರಾಧಿಕಾ ಜೊತೆ ನಟ ರಾಜ್‍ಕುಮಾರ್ ರಾವ್ ಕೂಡಾ ಇದ್ದರು.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!