Saturday , February 16 2019
ಕೇಳ್ರಪ್ಪೋ ಕೇಳಿ
Home / Film News / `ಸಲ್ಮಾನ್ ನನ್ನ ಗಂಡ’ ಅಂತ ಕಿರುಚಾಡುತ್ತಾ ಸಲ್ಲು ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಳು ಮಹಿಳೆ…!

`ಸಲ್ಮಾನ್ ನನ್ನ ಗಂಡ’ ಅಂತ ಕಿರುಚಾಡುತ್ತಾ ಸಲ್ಲು ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಳು ಮಹಿಳೆ…!

ಮುಂಬೈ : ಸಿನೆಮಾ ನಟರಿಗೆ ಅಭಿಮಾನಿಗಳಿರೋದು ಕಾಮನ್. ಆದರೆ, ಕೆಲವು ಸಂದರ್ಭದಲ್ಲಿ ಈ ಅಭಿಮಾನ ಅತಿರೇಕದ ಮಟ್ಟಕ್ಕೆ ಹೋಗಿರುತ್ತದೆ… ಅದರಲ್ಲೂ ಬಾಲಿವುಡ್‍ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್‍ಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ಸ್ವಲ್ಪ ಜಾಸ್ತಿ ಅಂತಾನೆ ಹೇಳ್ಬಹುದು… ಇದರಲ್ಲಿ ಒಬ್ಬಳು ಅಭಿಮಾನಿಯೊಬ್ಬಳು ಸಲ್ಮಾನ್ ವಾಸಿಸುತ್ತಿದ್ದ ಅಪಾಟ್‍ಮೆಂಟ್‍ಗೇ ನುಗ್ಗಿ `ಸಲ್ಮಾನ್ ನನ್ನ ಗಂಡ’ ಎಂದು ಕಿರುಚಾಡಿದ್ದಾಳೆ ಜೊತೆಗೆ ಆತ್ಮಹತ್ಯೆಗೂ ಯತ್ನಿಸಿದ್ದಾಳೆ…!

ಸಲ್ಮಾನ್ ಖಾನ್ ಇರುವ ಗ್ಯಾಲಕ್ಸಿ ಅಪಾರ್ಟ್‍ಮೆಂಟ್‍ಗೆ ನುಗ್ಗಿದ್ದ ಮಹಿಳೆಯೊಬ್ಬಳು ಈ ರಂಪಾಟ ಮಾಡಿದ್ದಳು. ಮಧ್ಯಾಹ್ನ ಅಪಾರ್ಟ್‍ಮೆಂಟ್‍ನ ಸೆಕ್ಯೂರಿಟಿ ಗಾರ್ಡ್ ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಈಕೆ ಒಳನುಗ್ಗಿದ್ದಳು. ಬಳಿಕ ಟೆರೆಸ್ ಮೂಲಕ ಸಲ್ಮಾನ್ ಮನೆ ಎದುರಿಗೆ ಬಂದು ಬಾಗಿಲು ಬಡೆದಿದ್ದಾಳೆ. ಈ ವೇಳೆ, ಮನೆಯಲ್ಲಿದ್ದ ಅಡುಗೆಯವರು ಬಾಗಿಲು ತೆಗೆದಿದ್ದರು. ಇನ್ನು, ಈ ಮಹಿಳೆಯ ಕೈಯಲ್ಲಿ ಕಬ್ಬಿಣದ ಸರಳುಗಳೂ ಇದ್ದವು. ಇದನ್ನು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಈಕೆ ಕಿರುಚಾಡುತ್ತಿದ್ದಳು. ಒಂದು ಕ್ಷಣ ಎಲ್ಲರೂ ಆತಂಕಗೊಳ್ಳುವ ಕ್ಷಣ ಅದು. ಆದ್ರೆ, ಅನಾಹುತ ಆಗುವ ಮೊದಲು ಅಲ್ಲಿಗೆ ಬಂದ ಅಗ್ನಿಶಾಮಕ ದಳ ಯುವತಿಯನ್ನು ಮನವೊಲಿಸಿ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು.. ಇತ್ತೀಚಿಗೆ ಸಲ್ಮಾನ್ ಮನೆಯಲ್ಲಿ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ…

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!