Friday , April 20 2018
Home / Interval / ಬಾಹುಬಲಿ ರಾಣಾರಿಗೆ ಒಂದು ಕಣ್ಣು ಕಾಣಿಸೋದೇ ಇಲ್ಲ…!!!

ಬಾಹುಬಲಿ ರಾಣಾರಿಗೆ ಒಂದು ಕಣ್ಣು ಕಾಣಿಸೋದೇ ಇಲ್ಲ…!!!

ರಾಣಾ ದಗ್ಗುಬ್ಬಾಟಿ… ಎಲ್ಲರಿಗೂ ಚಿರಪರಿಚಿತ ನಟ… ಅದರಲ್ಲೂ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಮೂಲಕ ರಾಣಾ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದರು. ಚಿತ್ರದ ನಾಯಕ ಪ್ರಭಾಸ್‍ಗೆ ಸರಿಸಾಟಿಯಾದ ಬಲ್ಲಾಳದೇವ ಪಾತ್ರದ ಮೂಲಕ ರಾಣಾ ಪ್ರಭಾಸ್‍ರಷ್ಟೇ ಜನಮನ್ನಣೆಗೆ ಪಾತ್ರರಾದವರು. ಆದರೆ, ಇಂತಹ ರಾಣಾ ಪ್ರಮುಖ ದೃಷ್ಟಿ ದೋಷವೊಂದರಿಂದ ಬಳಲುತ್ತಿದ್ದಾರೆ. ಬಹುಶಃ ಎಲ್ಲರಿಗೂ ಗೊತ್ತಿರಲಿಕ್ಕಿಲ್ಲ. ರಾಣಾರ ಒಂದು ಕಣ್ಣು ಕಾಣುವುದೇ ಇಲ್ಲ! ಸ್ವತಃ ರಾಣಾ ಅವರೇ ಹೇಳಿರೋ ಸತ್ಯ ಇದು…! ಈ ಹಿಂದೆ ಟಿವಿ ಕಾರ್ಯಕ್ರಮವೊಂದರಲ್ಲಿ ರಾಣಾ ಈ ವಿಷಯವನ್ನು ಹೇಳಿದ್ದಾಗ ಎಲ್ಲರೂ ಒಂದು ಸಲ ಚಕಿತಗೊಂಡಿದ್ದರು…!

`ನಾನು ನನ್ನ ಜೀವನದ ಪ್ರಮುಖ ವಿಷಯವನ್ನು ನಾನು ನಿಮಗೆ ಹೇಳುತ್ತಿದ್ದೇನೆ. ನನ್ನ ಬಲಗಣ್ಣು ಕಾಣುವುದಿಲ್ಲ. ನಾನು ಬರೀ ಎಡಗಣ್ಣಿನಿಂದ ಮಾತ್ರ ನೋಡುತ್ತಿದ್ದೇನೆ. ಚಿಕ್ಕಂದಿನಿಂದಲೂ ಈ ಸಮಸ್ಯೆ ಇದ್ದು, ಈಗ ಇರುವ ಬಲಗಣ್ಣು ವ್ಯಕ್ತಿಯೊಬ್ಬರು ಮೃತಪಟ್ಟ ನಂತರ ದಾನ ಮಾಡಿದ ಕಣ್ಣುಗಳು. ಆದರೂ ನಾನು ಈಗ ನನ್ನ ಎಡಗಣ್ಣನ್ನು ಮುಚ್ಚಿದರೆ ನೀವು ಯಾರೂ ನನಗೆ ಕಾಣಿಸೋದಿಲ್ಲ’ ಎಂದು ಟಿವಿಯ ಕಾರ್ಯಕ್ರಮದಲ್ಲಿ ಪ್ರಭಾಸ್ ಹೇಳುವಾಗ ಎಲ್ಲರಿಗೂ ಶಾಕ್ ಆಗಿದ್ದರು. 2016ರಲ್ಲಿ ಯುಟ್ಯೂಬ್‍ಗೆ ಅಪ್‍ಲೋಡ್ ಆದ ಈ ವೀಡಿಯೋ ಇಂಟರ್‍ನೆಟ್‍ನಲ್ಲಿ ಈಗಲೂ ಹರಿದಾಡುತ್ತಿದೆ.

About sudina

Check Also

ಬಿ ಟೌನ್​ನಲ್ಲಿ ಸುನಿಲ್ ಶೆಟ್ಟಿ ‘ಅಣ್ಣ’ ಆಗಿದ್ದು ಹೇಗೆ ಗೊತ್ತಾ…?

ಸುನಿಲ್ ಶೆಟ್ಟಿ ಬಾಲಿವುಡ್​ನ ಕಟ್​ಮಸ್ತ್​ ಹೀರೋ. ಕರುನಾಡ ಕುವರ ಇವರು. ಸುನಿಲ್ ಶೆಟ್ಟಿ ಮೂಲ ಕರ್ನಾಟಕದ ದಕ್ಷಿಣ ಕನ್ನಡ. ಇಂತಹ …

Leave a Reply

Your email address will not be published. Required fields are marked *

error: Content is protected !!