ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ ಲ್ಯಾಂಡ್ ಆಗುವ ವೇಳೆ ರನ್ವೇ ಲೈಟ್ಗಳಿಗೆ ತಾಗಿದೆ. ಹೀಗಾಗಿ, ಸುರಕ್ಷತೆ ದೃಷ್ಟಿಯಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಒಂದೂವರೆ ಗಂಟೆಯಷ್ಟು ಕಾಲ ಸ್ಥಗಿತಗೊಳಿಸಲಾಗಿತ್ತು. ನಿನ್ನೆ ರಾತ್ರಿ 10.30 ಸುಮಾರಿಗೆ ಈ ಘಟನೆ ನಡೆದಿದೆ.
ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಪೈಸ್ಜೆಟ್ನ ಎಸ್ಜಿ1238 ವಿಮಾನ ಲ್ಯಾಂಡ್ ಆಗುವಾಗ ರನ್ ವೇಯ ಮೂರು ಲೈಟ್ಗಳಿಗೆ ತಾಗಿದೆ. ಹೀಗಾಗಿ, ರಾತ್ರಿ 10.47 ರಿಂದ 11.28ರ ವರೆಗೆ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ. ಇನ್ನು, ಅದೃಷ್ಟವಶಾತ್ ಈ ಘಟನೆಯಲ್ಲಿ ಪ್ರಯಾಣಿಕರಿಗೆ ಗಾಯ ಹಾಗೂ ವಿಮಾನಕ್ಕೆ ಹಾನಿಯಾಗಿಲ್ಲ. ಈ ಘಟನೆಯ ಬಳಿಕ 10 ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿತ್ತು. ಎಂಟು ವಿಮಾನ ಚೆನ್ನೈಗೆ, ತಲಾ ಒಂದೊಂದು ವಿಮಾನವನ್ನು ತಿರುಚನಪಲ್ಲಿ ಹಾಗೂ ಕೊರಮತ್ತೂರಿಗೆ ಡೈವರ್ಟ್ ಮಾಡಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.