Friday , April 20 2018
Home / Interval / ಹೆಸರಿನ ಕೊನೆಯಲ್ಲಿ LE ಮತ್ತು ಡಿಂಪಲ್ ನಂಬಿಕೆ… : ಪುತ್ರಿಯ ಸೋಲಿಗೆ ಇದೇ ಕಾರಣನಾ…?

ಹೆಸರಿನ ಕೊನೆಯಲ್ಲಿ LE ಮತ್ತು ಡಿಂಪಲ್ ನಂಬಿಕೆ… : ಪುತ್ರಿಯ ಸೋಲಿಗೆ ಇದೇ ಕಾರಣನಾ…?

ಕಪಾಡಿಯಾ ಕುಟುಂಬದಲ್ಲೊಂದು ವಿಚಿತ್ರ ನಂಬಿಕೆ. ಅದೇನೆಂದರೆ, ತಮ್ಮ ಕುಟುಂಬದಲ್ಲಿ ಹೆಣ್ಣು ಮಕ್ಕಳು ಜನಿಸಿದರೆ ಅವರ ಹೆಸರಿನ ಕೊನೆಯಲ್ಲಿ `ಎಲ್‍ಇ’ (LE) ಎಂಬ ಅಕ್ಷರ ಬರುವಂತೆ ಹೆಸರಿಡುವುದು. ಇದಕ್ಕಾಗಿ ಚಿನ್ನಿಭಾಯಿ ಕಪಾಡಿಯಾ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳ ಹೆಸರನ್ನೂ ಇದೇ ರೀತಿ ಇಟ್ಟಿದ್ದರು. ಅವರೇ ಡಿಂಪಲ್(Dimple) ಮತ್ತು ಸಿಂಪಲ್(Simple). ಡಿಂಪಲ್ ಕಪಾಡಿಯಾ ಅವರು ಸೂಪರ್ ಸ್ಟಾರ್ ರಾಜೇಶ್ ಖನ್ನಾರನ್ನು ಮದುವೆಯಾದರು. ಇದಾದ ಬಳಿಕ ಇವರ ದಾಂಪತ್ಯಕ್ಕೆ ಮೊದಲ ಹೆಣ್ಣು ಮಗು ಆಯ್ತು. ಹೀಗಾಗಿ, ತಮ್ಮ ಕುಟುಂಬದ ನಂಬಿಕೆಯಂತೆ ಡಿಂಪಲ್ ತನ್ನ ಮಗಳಿಗೆ ಹೆಸರಿನ ಕೊನೆಯಲ್ಲಿ `ಎಲ್‍ಇ’ ಬರುವಂತೆ ಹೆಸರಿಟ್ಟರು. ಅದೇ ಟ್ವಿಂಕಲ್ (Twinkle). ಎರಡನೇ ಹೆಣ್ಣು ಮಗು ಆಯ್ತು. ಆ ಹೆಣ್ಣು ಮಗುವಿನ ಹೆಸರು ರಿಂಕಲ್(Rinkle)…! ಟ್ವಿಂಕಲ್ ಖನ್ನಾ ತಾಯಿಯಂತೆ ಸಿನೆಮಾರಂಗದಲ್ಲಿ ಮಿಂಚಲು ಆರಂಭಿಸಿದರು. ನಟ ಅಕ್ಷಯ್ ಕುಮಾರ್‍ರನ್ನೂ ವರಸಿದರು. ಹೀಗೆ ದಿನ ಕಳೆದಂತೆ ಎರಡನೇ ಮಗಳು ರಿಂಕಲ್ ರನ್ನೂ ಸಿನೆಮಾ ರಂಗದಲ್ಲಿ ಲಾಂಚ್ ಮಾಡಲು ತಾಯಿ ಡಿಂಪಲ್ ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಕೆಲವರು ಸಿನೆಮಾಗಳಿಗೆ ಈ ರಿಂಕಲ್ ಎಂಬ ಹೆಸರು ಅಷ್ಟು ಸೂಟ್ ಆಗುತ್ತಿಲ್ಲ ಎಂಬ ಸಲಹೆಯನ್ನು ನೀಡಿದರು. ಹೀಗಾಗಿ, ರಿಂಕಲ್‍ಗೆ ಹೊಸ ಹೆಸರು ಹುಡುಕಾಟ ಆರಂಭವಾಯ್ತು. ಆದರೆ, ಕೊನೆಯಲ್ಲಿ `ಎಲ್‍ಇ’ ಬರುವಂತಹ ಹೆಸರು ಸಿಗಲೇ ಇಲ್ಲ! ಇತ್ತ, ತಾಯಿಗೆ ತನ್ನ ಮಗಳಿಗೆ ಸರಿಯಾದ ಹೆಸರಿಡದೆ ಚಡಪಡಿಕೆ ಜೋರಾಯ್ತು. ಮತ್ತೊಂದು ಕಡೆ ರಿಂಕಲ್ ಚಿತ್ರದ ಶೂಟಿಂಗ್ ಮುಗಿದು ಬಿಡುಗಡೆ ದಿನಾಂಕವೂ ಹತ್ತಿರಕ್ಕೆ ಬಂದಿತ್ತು. ಆದರೂ ಹೊಸ ಹೆಸರು ಸಿಕ್ಕಿಯೇ ಇರಲಿಲ್ಲ. ಮೊದಲ ಚಿತ್ರ. ಹೀಗಾಗಿ, ಸರಿಯಾದ ಟೈಮ್‍ಗೇ ರಿಲೀಸ್ ಆಗ್ಬೇಕು. ಇಂತಹ ನಂಬಿಕೆಗೆ ಜೋತು ಬೀಳಬೇಡಿ ಎಂದು ಕೆಲವರು ಡಿಂಪಲ್‍ಗೆ ಸಲಹೆ ನೀಡಿದರು. ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಮನಸ್ಸಿಲ್ಲದ ಮನಸ್ಸಿನಲ್ಲಿ ಡಿಂಪಲ್ ರಿಂಕಲ್‍ಗೆ ಹೊಸ ಹೆಸರಿಗೆ ಸಮ್ಮತಿಸಿದರು. ಆ ಹೆಸರೇ ರಿಂಕಿ ಖನ್ನಾ(Rinke) . ಚಿತ್ರ ಬಿಡುಗಡೆ ಆಯ್ತು. ಆದರೆ, ಈ ಚಿತ್ರ ಸೋಲು ಕಂಡಿತ್ತು. ಅದೇ `ಪ್ಯಾರ್ ಮೇ ಕಬಿ ಕಬಿ’ ಎರಡನೇ ಚಿತ್ರ ಬಂತು `ಜಿಸ್ ದೇಶ್ ಮೇ ಗಂಗಾ ಬೆಹ್ತಾ ಹೇ’. ಅದೂ ಗೆಲ್ಲಲಿಲ್ಲ. ನಾಲ್ಕು ವರ್ಷಗಳಲ್ಲಿ ರಿಂಕಿ ದೊಡ್ಡ ದೊಡ್ಡ ನಟರೊಂದಿಗೆ ಎಂಟು ಚಿತ್ರ ಮಾಡಿದರು. ಆದರೆ, ಯಾವುದೇ ಚಿತ್ರ ಕೂಡಾ ಗೆಲುವು ಸಾಧಿಸಲೇ ಇಲ್ಲ. ಇದು ರಿಂಕಿ ಸ್ಥೈರ್ಯವನ್ನೇ ಕುಸಿಯುವಂತೆ ಮಾಡಿತ್ತು. ಹೀಗಾಗಿ, ರಿಂಕಿ ಚಿತ್ರರಂಗವನ್ನೇ ತೊರೆದರು. ಮದುವೆಯಾದರು. ಆದರೆ, ಈಗಿನ ವರೆಗೂ ರಿಂಕಿ ಅವರ ಹೆಸರಿನ ಕೊನೆಯಲ್ಲಿ `ಎಲ್‍ಇ’ ಅಕ್ಷರ ಇಲ್ಲದೇ ಇರೋದೇ ಅವರ ಚಿತ್ರಗಳ ಹೀನಾಯ ಸೋಲಿಗೆ ಕಾರಣ ಎಂದು ನಂಬುವವರು ಇದ್ದಾರೆ…! ಬಹುಶಃ ತಾಯಿ ಡಿಂಪಲ್ ಕೂಡಾ ಇದನ್ನೇ ನಂಬಿರಬಹುದು…

About sudina

Check Also

ಬಿ ಟೌನ್​ನಲ್ಲಿ ಸುನಿಲ್ ಶೆಟ್ಟಿ ‘ಅಣ್ಣ’ ಆಗಿದ್ದು ಹೇಗೆ ಗೊತ್ತಾ…?

ಸುನಿಲ್ ಶೆಟ್ಟಿ ಬಾಲಿವುಡ್​ನ ಕಟ್​ಮಸ್ತ್​ ಹೀರೋ. ಕರುನಾಡ ಕುವರ ಇವರು. ಸುನಿಲ್ ಶೆಟ್ಟಿ ಮೂಲ ಕರ್ನಾಟಕದ ದಕ್ಷಿಣ ಕನ್ನಡ. ಇಂತಹ …

Leave a Reply

Your email address will not be published. Required fields are marked *

error: Content is protected !!