Friday , April 20 2018
Home / Film News / ಈ ಫೋಟೋದಲ್ಲಿರುವ ಈಗಿನ ಸ್ಟಾರ್ ನಟ ನಟಿಯನ್ನು ಗುರುತಿಸುತ್ತೀರಾ…?

ಈ ಫೋಟೋದಲ್ಲಿರುವ ಈಗಿನ ಸ್ಟಾರ್ ನಟ ನಟಿಯನ್ನು ಗುರುತಿಸುತ್ತೀರಾ…?

ಹೈದರಾಬಾದ್ : ಚಿತ್ರರಂಗದ ದಂತಕತೆ ನಟಿ ಸಾವಿತ್ರಿ ಅವರ ಜೀವನಕತೆ ಸಿನೆಮಾವಾಗುತ್ತಿದೆ… ಈ ಚಿತ್ರದಲ್ಲಿ ಸ್ಟಾರ್ ನಟ ನಟಿಯರು ಅಭಿನಯಿಸಿದ್ದಾರೆ. ಅದರಲ್ಲೂ ಇತ್ತೀಚಿಗೆ ರಿಲೀಸ್ ಆಗಿರುವ ಈ ಚಿತ್ರದ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಇರುವವವರು ಈಗಿನ ಸ್ಟಾರ್ ನಟ ನಟಿಯರು. ಅವರೇ ಕೀರ್ತಿ ಸುರೇಶ್ ಮತ್ತು ದುಲ್ಕರ್ ಸಲ್ಮಾನ್. ಕೀರ್ತಿ ಸುರೇಶ್ ಈ ಚಿತ್ರದಲ್ಲಿ ಸಾವಿತ್ರಿ ಅವರ ಪಾತ್ರವನ್ನು ಮಾಡುತ್ತಿದ್ದಾರೆ. ಸಲ್ಮಾನ್ ಜೆಮಿನಿ ಗಣೇಶನ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇನ್ನು, ಇನ್ನೋರ್ವ ಸ್ಟಾರ್ ನಟಿ ಸಮಂತಾ ಕೂಡಾ ಈ ಚಿತ್ರದಲ್ಲಿ ಇದ್ದಾರೆ. ಜೊತೆಗೆ, ಮೋಹನ್ ಬಾಬು ಎಸ್.ವಿ.ರಂಗರಾವ್ ಅವರ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ಕೀರ್ತಿ ಸುರೇಶ್ ಮತ್ತು ಸಲ್ಮಾನ್ ಸಾವಿತ್ರಿ ಮತ್ತು ಜೆಮಿನಿ ಗಣೇಶನ್ ರೀತಿ ಪೋಸ್ ಕೊಟ್ಟಿರೋ ಫೋಟೋ ಈಗ ಸಖತ್ ವೈರಲ್ ಆಗುತ್ತಿದೆ. ಥೇಟ್ ಬ್ಲ್ಯಾಕ್ ಆಂಡ್ ವೈಟ್ ಜಮಾನಾವನ್ನೇ ಈ ಫೋಟೋ ನೆನಪಿಸುತ್ತಿದೆ. ಈ ಚಿತ್ರಕ್ಕೆ ಮಹಾನಟಿ ಎಂಬ ಟೈಟಲ್ ಇಡಲಾಗಿದೆ.

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!