Friday , April 20 2018
Home / Film News / ಕಣ್ಣೋಟದ ಮಾನಸ ಸರೋವರ… : ಮಸ್ತ್ ಆಗಿದೆ ರಾಮಕೃಷ್ಣ, ಪದ್ಮವಾಸಂತಿ ವೀಡಿಯೋ…

ಕಣ್ಣೋಟದ ಮಾನಸ ಸರೋವರ… : ಮಸ್ತ್ ಆಗಿದೆ ರಾಮಕೃಷ್ಣ, ಪದ್ಮವಾಸಂತಿ ವೀಡಿಯೋ…

ಬೆಂಗಳೂರು : ಮಲಯಾಳಂ ಬೆಡಗಿ ಪ್ರಿಯಾ ವಾರಿಯರ್ ಕಣ್ಣೋಟದಲ್ಲೇ ಅದೆಷ್ಟೋ ಮನಸ್ಸುಗಳಿಗೆ ಹೂಬಾಣ ಬಿಟ್ಟಿದ್ದು ಹಳೇ ವಿಷಯ. ಪ್ರಿಯಾರ ಈ ಹಾಡೇ ಅದೆಷ್ಟೋ ವೀಡಿಯೋ ಸೃಷ್ಟಿಗೆ ಕಾರಣವಾಗಿದೆ. ಈಗ ಸ್ಯಾಂಡಲ್‍ವುಡ್‍ನ ಹಿರಿಯ ನಟ ರಾಮಕೃಷ್ಣ ಮತ್ತು ಪದ್ಮವಾಸಂತಿ ಅವರು ಕೂಡಾ ಇದೇ ರೀತಿಯ ಕಣ್ಣೋಟದ ವೀಡಿಯೋಗೆ ಮಸ್ತ್ ಮಸ್ತ್ ಆಗಿಯೇ ಪೋಸ್ ಕೊಟ್ಟಿದ್ದಾರೆ.

ಉದಯ ಟಿವಿಯಲ್ಲಿ ಪ್ರಸಾರವಾಗುವ `ಮಾನಸ ಸರೋವರ’ ಧಾರಾವಾಹಿಯಲ್ಲಿ ಇವರಿಬ್ಬರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಣಯ ರಾಜ ಶ್ರೀನಾಥ್ ಅವರು ಕೂಡಾ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ `ಮಾನಸ ಸರೋವರ’ ಚಿತ್ರದ ಮುಂದುವರಿದ ಭಾಗವಾಗಿ ಈ ಧಾರಾವಾಹಿ ಸಾಗುತ್ತಿದೆ… ಈ ಧಾರಾವಾಹಿಯ ಪಾತ್ರಧಾರಿಗಳ ಈ ಕಣ್ಣೋಟದ ಸೀನ್ ಈಗ ಸಖತ್ ಇಷ್ಟವಾಗಿದ್ದು, ವೈರಲ್ ಆಗುತ್ತಿದೆ. ರಾಮಕೃಷ್ಣರ ತುಂಟ ನಗು, ಪದ್ಮಾವಾಸಂತಿ ಅವರ ಕುಡಿ ನೋಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!