Monday , August 20 2018
ಕೇಳ್ರಪ್ಪೋ ಕೇಳಿ
Home / Film News / ಸ್ವಂತ ವಿಮಾನದಲ್ಲಿ ಚಿರು ಕುಟುಂಬದ ಖುಷಿ…

ಸ್ವಂತ ವಿಮಾನದಲ್ಲಿ ಚಿರು ಕುಟುಂಬದ ಖುಷಿ…

ಹೈದರಾಬಾದ್ : ಈ ಹಿಂದೆ ಬ್ಯುಸಿ ಸೆಡ್ಯೂಲ್ಡ್ ಹಿನ್ನೆಲೆಯಲ್ಲಿ ಬಾಡಿಗೆಗೆ ಬಾರ್ಟೆಡ್ ಫೈಟ್‍ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಪ್ರಯಾಣಿಸುತ್ತಿದ್ದರು. ಬಳಿಕ ಚಿರು ಸಹೋದರ ಪವನ್ ಕಲ್ಯಾಣ್ ಅವ್ರು ಕೂಡಾ ತಮ್ಮ ಗಬ್ಬರ್ ಸಿಂಗ್ ಚಿತ್ರದ ಪ್ರಮೋಷನ್‍ಗಾಗಿ ಬಾಡಿಗೆ ವಿಮಾನದಲ್ಲೇ ಸುತ್ತಾಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಚಿರು ಕುಟುಂಬ ಸ್ವಂತ ವಿಮಾನವನ್ನು ಪಡೆದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇಂಟರ್‍ನೆಟ್‍ನಲ್ಲಿ ಫೋಟೋವೊಂದು ಹರಿದಾಡುತ್ತಿದೆ. ವಿಮಾನದಲ್ಲಿ ಕುಟುಂಬದೊಂದಿಗೆ ಖುಷಿಯ ಕ್ಷಣವನ್ನು ಅನುಭವಿಸುತ್ತಿರುವ ದೃಶ್ಯವಿದು. ಈ ಫೋಟೋದಲ್ಲಿ ಚಿರಂಜೀವಿ, ಚರಣ್, ಸುರೇಖಾ, ಉಪಾಸನಾ, ಸುಶ್ಮಿತಾ ಮತ್ತು ಮಕ್ಕಳು ಸೇರಿ ಹಲವರು ಇದ್ದಾರೆ. ವೈಜಾಗ್‍ಗೆ ಇವರೆಲ್ಲಾ ತಮ್ಮದೇ ಸ್ವಂತ ವಿಮಾನದಲ್ಲಿ ಹೋಗಿದ್ದರು. ಚರಣ್ ಅಭಿನಯದ ರಂಗಸ್ಥಳಂ ಚಿತ್ರದ ಪ್ರೀರಿಲೀಸ್ ಇವೆಂಟ್‍ಗಾಗಿ ಇವ್ರೆಲ್ಲಾ ಕುಟುಂಬದೊಂದಿಗೆ ಹೋಗಿದ್ದರು… ಇನ್ನು, ಹೋಗುವಾಗ ಈ ವಿಮಾನದಲ್ಲಿ ಚಿತ್ರದ ನಾಯಕಿ ಸಮಂತಾ ಸೇರಿದಂತೆ ಬೇರೆ ಕಲಾವಿದರು ಕೂಡಾ ಇದ್ದರು. ಆದರೆ, ಅಲ್ಲಿಂದ ವಾಪಸ್ ಬರುವಾಗ ವಿಮಾನದಲ್ಲಿದ್ದ ಇದ್ದುದ್ದು ಬರೀ ಕುಟುಂಬಸ್ಥರೇ… ಇದು ಪಕ್ಕಾ ಫ್ಯಾಮಿಲಿ ಟೈಮ್ ಆಗಿತ್ತು. ಎಲ್ಲರೂ ರಿಲ್ಯಾಕ್ಸ್ ಮೂಡ್‍ನಲ್ಲಿದ್ದರೆ, ಅಲ್ಲು ಅರವಿಂದ್ ಅವರ ಕೈಯಲ್ಲಿ ಒಂದು ಪೆಗ್ ಕೂಡಾ ಇದೆ…!

About sudina

Check Also

ಕೊನೆಗೂ ಈಡೇರಿತು ತ್ರಿಶಾ ಕಂಡಿದ್ದ ಬಹು ದಿನಗಳ ಕನಸು…

ಚೆನ್ನೈ : ಖ್ಯಾತ ನಟಿ ತ್ರಿಶಾ ಈಗ ಸಖತ್ ಖುಷಿಯಲ್ಲಿದ್ದಾರೆ. ಅವರ ಆಸೆಯೊಂದು ಕೊನೆಗೂ ಕೈಗೂಡಿದೆ… ದಕ್ಷಿಣ ಭಾರತ ಬಹುತೇಕ …

Leave a Reply

Your email address will not be published. Required fields are marked *

error: Content is protected !!