Sunday , October 21 2018
ಕೇಳ್ರಪ್ಪೋ ಕೇಳಿ
Home / News NOW / ವಿದ್ಯಾರ್ಥಿಗಳ ಪ್ರತಿಭಟನೆ : ದಾದರ್ ಮಾತುಂಗ ನಡುವಣ ರೈಲ್ವೇ ಸೇವೆ ಸ್ತಬ್ಧ…

ವಿದ್ಯಾರ್ಥಿಗಳ ಪ್ರತಿಭಟನೆ : ದಾದರ್ ಮಾತುಂಗ ನಡುವಣ ರೈಲ್ವೇ ಸೇವೆ ಸ್ತಬ್ಧ…

ಮುಂಬೈ : ವಾಣಿಜ್ಯ ನಗರಿ ಮುಂಬೈಯಲ್ಲಿ ರೈಲುಗಳೇ ಪ್ರಮುಖ ಸಂಚಾರ ಮಾಧ್ಯಮ. ಆದ್ರೆ, ಇವತ್ತು ಇಲ್ಲಿನ ದಾದರ್ ಮತ್ತು ಮಾತುಂಗ ನಡುವಣ ರೈಲು ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ. ಆಲ್ ಇಂಡಿಯಾ ರೈಲ್ವೇ ಆಕ್ಟ್ ಅಪ್ರಿಂಟೆಶಿಪ್ ಅಸೋಶಿಯೇಷನ್‍ನಲ್ಲಿ ಕಲಿಯುತ್ತಿರುವ ನೂರಾರು ವಿದ್ಯಾರ್ಥಿಗಳು ಇವತ್ತು ರೈಲುಗಳನ್ನು ತಡೆದು ಪ್ರತಿಭಟನೆ ನಡೆದಿದ್ದಾರೆ.

ರೈಲ್ವೆ ಇಲಾಖೆಯಲ್ಲಿ ಸೂಕ್ತ ಉದ್ಯೋಗಕ್ಕೆ ಆಗ್ರಹಿಸಿ ಈ ಪ್ರತಿಭಟನೆ ನಡೆಯುತ್ತಿದೆ. ರೈಲನ್ನು ತಡೆದು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ದಾದರ್ ಹಾಗೂ ಮಾತುಂಗ ನಡುವಣ ರೈಲು ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ. ಜೊತೆಗೆ, ವಿವಿಧ ಕಡೆ ಹೋಗುವ ಸುಮಾರು 30ಕ್ಕೂ ಹೆಚ್ಚು ರೈಲು ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ… ಬೆಳಗ್ಗೆ ಏಳು ಗಂಟೆಯಿಂದ ವಿದ್ಯಾರ್ಥಿಗಳು ರೈಲು ತಡೆ ನಡೆಸುತ್ತಿದ್ದು, ವಿದ್ಯಾರ್ಥಿಗಳ ಈ ಪ್ರತಿಭಟನೆಯಿಂದ ಲಕ್ಷಾಂತರ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ.

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!