Friday , April 20 2018
Home / News NOW / ಚಿನ್ನಮ್ಮ ಶಶಿಕಲಾ ಪತಿ ನಟರಾಜನ್ ಕೊನೆಯುಸಿರು

ಚಿನ್ನಮ್ಮ ಶಶಿಕಲಾ ಪತಿ ನಟರಾಜನ್ ಕೊನೆಯುಸಿರು

ಚೆನ್ನೈ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತ ಸ್ನೇಹಿತೆ, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಚಿನ್ನಮ್ಮ ಶಶಿಕಲಾ ಪತಿ ನಟರಾಜನ್ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ನಟರಾಜನ್ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ನಟರಾಜನ್ ವೆಂಟಿಲೇಟರ್ ಸಪೋರ್ಟ್‍ನಲ್ಲೇ ಇದ್ದರು. ಆದರೆ, ಇವತ್ತು ಮುಂಜಾನೆ ಸುಮಾರು 1.35ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ನಟರಾಜ್ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ನಟರಾಜನ್ ಅವರಿಗೆ 74 ವರ್ಷ ವಯಸ್ಸಾಗಿತ್ತು. ಮಾರ್ಚ್ 17 ರಿಂದ ಆಸ್ಪತ್ರೆಯಲ್ಲಿ ಇದ್ದ ನಟರಾಜನ್ ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಇನ್ನು ಪತಿಯ ನಿಧನ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಶಶಿಕಲಾ ಪೆರೋಲ್ ಮೇಲೆ ಚೆನ್ನೈಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ. ಇದಾದ ಬಳಿಕವೇ ನಟರಾಜನ್ ಅಂತ್ಯಕ್ರಿಯೆ ನಡಯಲಿದೆ.

About sudina

Check Also

ಕಂದನ ಕೈ ಕಾಲಿಗೆ ಬಲೂನ್…! : ಮಗು ಎಷ್ಟು ಎಂಜಾಯ್ ಮಾಡ್ತಿದೆ ನೋಡಿ…!

ಮಗುವಿನ ಕೈ ಕಾಲಿಗೆ ಬಲೂನ್ ಕಟ್ಟಿರುವಂತಹ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಲಗಿಸಿದ್ದ ಕಂದನ ಕೈ ಕಾಲಿಗೆ ಬಲೂನ್ …

Leave a Reply

Your email address will not be published. Required fields are marked *

error: Content is protected !!