Monday , June 25 2018
ಕೇಳ್ರಪ್ಪೋ ಕೇಳಿ
Home / Earth / ಇವತ್ತು ಗುಬ್ಬಚ್ಚಿಗಳ ದಿನ…

ಇವತ್ತು ಗುಬ್ಬಚ್ಚಿಗಳ ದಿನ…

ಬೆಂಗಳೂರು : ಗುಬ್ಬಚ್ಚಿ… ಈ ಪುಟಾಣಿ ಪಕ್ಷಿಯನ್ನು ನೋಡೋದಕ್ಕೆಯೇ ಸುಂದರ… ಮನಸ್ಸಿಗೆ ಮುದ… ಆದ್ರೆ, ಆಧುನೀಕರಣ, ನಗರೀಕರಣದ ಹೊಡೆತಕ್ಕೆ ಈ ಸುಂದರ ಪಕ್ಷಿ ಸಂಕುಲವೇ ನಶಿಸುತ್ತಿದೆ. ಹಿಂದೆ ಎಲ್ಲೆಲ್ಲೂ ಕಾಣ ಸಿಗುತ್ತಿದ್ದ ಈ ಪುಟಾಣಿ ಪಕ್ಷಿಗಳು ಈಗ ಕಾಣಸಿಗೋದೇ ತುಂಬಾ ಅಪರೂಪ. ಮಾನವನ ಬದುಕಿನಲ್ಲಾದ ಆಧುನಿಕತೆಯ ಪ್ರಭಾವ, ಬದುಕಿನ ಶೈಲಿ ಗುಬ್ಬಚ್ಚಿಗಳ ಬದುಕನ್ನೇ ಕಸಿದುಕೊಂಡಿದೆ. ಈ ಸತ್ಯ ಗೊತ್ತಿದ್ದರೂ ಈ ಪಕ್ಷಿಗಳನ್ನು ಉಳಿಸುವ ನಿಟ್ಟಿನಲ್ಲಿ ಆದ ಕೆಲಸಗಳು ಬಹಳ ವಿರಳ.

ಹೀಗಾಗಿ, ಈ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ಮಾರ್ಚ್ 20ರಂದು ಗುಬ್ಬಚ್ಚಿ ದಿನವಾಗಿ ಆಚರಿಸಲಾಗುತ್ತದೆ. ನೇಚರ್ ಫಾರ್ ಸೊಸೈಟಿ ಫಾರ್ ಇಂಡಿಯಾ (ಎನ್‍ಎಫ್‍ಎಸ್‍ಐ) ಸಂಸ್ಥೆಯನ್ನು ಹುಟ್ಟು ಹಾಕಿದ್ದ ಮೊಹಮ್ಮದ್ ದಿಲ್ವಾರ್ 2010ರಲ್ಲಿ ಈ ಗುಬ್ಬಚ್ಚಿ ದಿನ ಕಲ್ಪನೆಯನ್ನು ಹುಟ್ಟುಹಾಕಿದ್ದರು. ಈ ಪರಿಕಲ್ಪನೆಗೆ ವಿಶ್ವದಾದ್ಯಂತ ವ್ಯಾಪಕ ಬೆಂಬಲವೂ ವ್ಯಕ್ತವಾಗಿದ್ದು, ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ಜೊತೆಗೆ, ಗುಬ್ಬಚ್ಚಿಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

About sudina

Check Also

ವಿಶ್ವದ ಅತೀ ದೊಡ್ಡ ಬೆಕ್ಕುಗಳನ್ನು ನೋಡಿದ್ದೀರಾ…?

ಫಾರ್ಮಿಂಗ್ಟನ್ ಹಿಲ್ಸ್ (ಓಕ್ಲ್ಯಾಂಡ್) : ಮಿಚಿಗನ್​ನಲ್ಲಿ ವಿಶ್ವದ ಅತೀ ದೊಡ್ಡ ಸಾಕು ಬೆಕ್ಕುಗಳಿವೆ. ಇಲ್ಲಿನ ಡೆಟ್ರಾಯಿಟ್​ನ ಒಂದೇ ಮನೆಯಲ್ಲಿ ದಾಖಲೆ …

Leave a Reply

Your email address will not be published. Required fields are marked *

error: Content is protected !!