ಮುಂಬೈ : ಬಾಲಿವುಡ್ ಬಿಗ್ ಬಿ ಅಮಿತಾಭ್ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್. ಪ್ರತೀದಿನ ತನ್ನ ಬದುಕಿನ ಒಂದಲ್ಲ ಒಂದು ವಿಷಯವನ್ನು ಅಮಿತಾಭ್ ಹಂಚಿಕೊಳ್ಳುತ್ತಾರೆ. ಈ ಸಲ ಅಮಿತಾಭ್ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. ತಾನು ಸಿನೆಮಾಗಳಲ್ಲಿ ಛಾನ್ಸ್ ಕೇಳುತ್ತಿದ್ದ ಕಾಲದ ಒಂದು ಫೋಟೋವನ್ನು ಬಚ್ಚನ್ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. 1968ರಲ್ಲಿ ತೆಗೆದ ಫೋಟೋ ಇದು. ಸಿನೆಮಾಕ್ಕೆ ಛಾನ್ಸ್ ಕೇಳೋಕೆ ಈ ಫೋಟೋವನ್ನು ಅಮಿತಾಭ್ ತೆಗೆಸಿಕೊಂಡಿದ್ದರು. ಆದರೆ, ಮೊದಲ ಪ್ರಯತ್ನದಲ್ಲೇ ಅಮಿತಾಭ್ ವಿಫಲವಾಗಿದ್ದರು. ಯಾಕೆಂದರೆ, ಅಂದು ಅವರಿಗೆ ಯಾವುದೇ ಛಾನ್ಸ್ ಸಿಕ್ಕಿರಲಿಲ್ಲ. ಅವರ ಅರ್ಜಿಯೇ ರಿಜೆಕ್ಟ್ ಆಗಿತ್ತು…
1969ರಲ್ಲಿ ರಿಲೀಸ್ ಆಗಿದ್ದ `ಸಾತ್ ಹಿಂದೂಸ್ಥಾನಿ’ ಅಮಿತಾಭ್ ಅಭಿನಯದ ಮೊದಲ ಚಿತ್ರ. ಆದರೆ, ಇದಕ್ಕಿಂತ ಮೊದಲು ಹಲವರು ಸಿನೆಮಾಗಳಿಗೆ ಇವ್ರು ಛಾನ್ಸ್ ಕೇಳಿದ್ದರು. ಆದರೆ, ಆರಂಭದ ದಿನಗಳಲ್ಲಿ ಅಮಿತಾಭ್ ಸಿನೆಮಾದಲ್ಲಿ ಛಾನ್ಸ್ ಪಡೆಯಲು ವಿಫಲವಾಗುತ್ತಿದ್ದರು.