Tuesday , August 21 2018
ಕೇಳ್ರಪ್ಪೋ ಕೇಳಿ
Home / News NOW / ಬೆಂಗಳೂರಿನಿಂದ ಉತ್ತರ ಕೋರಿಯಾಗೇ ಓಲಾ ಕ್ಯಾಬ್ ಬುಕ್ ಮಾಡಿದ ವಿದ್ಯಾರ್ಥಿ…! : 5 ದಿನ ಪ್ರಯಾಣಕ್ಕೆ 1.4 ಲಕ್ಷ ಅಷ್ಟೇ ಚಾರ್ಜ್…!

ಬೆಂಗಳೂರಿನಿಂದ ಉತ್ತರ ಕೋರಿಯಾಗೇ ಓಲಾ ಕ್ಯಾಬ್ ಬುಕ್ ಮಾಡಿದ ವಿದ್ಯಾರ್ಥಿ…! : 5 ದಿನ ಪ್ರಯಾಣಕ್ಕೆ 1.4 ಲಕ್ಷ ಅಷ್ಟೇ ಚಾರ್ಜ್…!

ಬೆಂಗಳೂರು : ಆ್ಯಪ್ ಆಧರಿತ ಸೇವೆಗಳು ಈಗ ಕಾಮನ್ ಆಗಿವೆ. ಪ್ರಮುಖ ಸಿಟಿಗಳಲ್ಲಿ ಈ ಆ್ಯಪ್ ಆಧರಿತ ಕ್ಯಾಬ್ ಸೇವೆಗಳಿಂದ ಜನರಿಗೆ ತುಂಬ ಪ್ರಯೋಜನವಾಗುತ್ತಿದೆ. ಆದರೆ, ಈಗ ಸಾಧ್ಯವೇ ಇಲ್ಲದಂತಹ ಪ್ರಯಾಣದ ಆಫರ್ ಒಂದನ್ನು ಓಲಾ ಕೊಟ್ಟಿದೆ…! ಈ ಸುದ್ದಿ ಕೇಳಿದರೆನೇ ನಿಮ್ಮ ತಲೆ ಒಮ್ಮೆ ಗಿರಗಿರ ತಿರುಗಬಹುದು…! ಯಾಕೆಂದರೆ, ವಿದ್ಯಾರ್ಥಿಯೊಬ್ಬರು ಬೆಂಗಳೂರಿಂದ ಉತ್ತರ ಕೋರಿಯಾಗೆ ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ…! ಇದು ಸಾಧ್ಯನಾ…? ಅಂತ ನೀವು ಅಂದುಕೊಳ್ಳಬಹುದು.. ಆದರೆ, ಟ್ಯಾಕ್ಸಿ ಸೇವೆ ಬುಕ್ ಮಾಡಲು ಈ ವಿದ್ಯಾರ್ಥಿಗೆ ಸಾಧ್ಯವಾಗಿದೆ. ಜೊತೆಗೆ, ಬೆಂಗಳೂರಿಂದ ಉತ್ತರ ಕೋರಿಯಾಗೆ ಹೋಗಲು 1.4 ಲಕ್ಷ ರೂಪಾಯಿ ಚಾರ್ಜ್ ಅನ್ನೂ ಆ ಆ್ಯಪ್ ತೋರಿಸಿದೆ…!

Image credit : prashant shashi

ಇಷ್ಟಕ್ಕೂ ಇಲ್ಲಿ ಆಗಿದ್ದು ಇಷ್ಟೇ… 21 ವರ್ಷದ ಪ್ರಶಾಂತ್ ಶಹಿ ಎಂಬ ವಿದ್ಯಾರ್ಥಿ ಗೂಗಲ್ ಮ್ಯಾಪ್ ಬದಲಾಗಿ ಓಲಾ ಆ್ಯಪ್‍ನಲ್ಲಿ ಉತ್ತರ ಕೋರಿಯಾದಿಂದ ದಕ್ಷಿಣ ಕೋರಿಯಾಕ್ಕೆ ಸಂಧಿಸುವ ರೋಡ್ ಮ್ಯಾಪ್ ಅನ್ನು ನೋಡುತ್ತಿದ್ದರು. ಈ ವೇಳೆ, ಬೆಂಗಳೂರಿನಿಂದಲೇ ಓಲಾ ಕ್ಯಾಬ್ ಬುಕ್ ಮಾಡಬಹುದು ಎಂಬ ಆಪ್ಶನ್ ಪ್ರಶಾಂತ್ ಕಣ್ಣಿಗೆ ಬಿತ್ತು. ನೋಡುವಾಗಲೇ ಅಚ್ಚರಿ ಆಯ್ತು. ತಕ್ಷಣ, ಇದು ಸಾಧ್ಯನಾ ಅನ್ನೋ ಕುತೂಹಲವೂ ಹೆಚ್ಚಾಯ್ತು… ಬುಕ್ ಮಾಡಿಯೇ ಬಿಟ್ಟರು…!


ಪ್ರಶಾಂತ್ ಈ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಇದರ ಪ್ರಕಾರ, ಕ್ಯಾಬ್ ಕಂಪೆನಿ ಈ ರೈಡ್ ಅನ್ನು ಕನ್ಫರ್ಮ್ ಮಾಡಿತ್ತು. ಜೊತೆಗೆ, ಡ್ರೈವರ್ ಸೇರಿದಂತೆ ಇತರ ಮಾಹಿತಿಯನ್ನೂ ಪ್ರಶಾಂತ್ ಫೋನ್‍ಗೆ ಕಳುಹಿಸಿತ್ತು. ಈ ಕಂಪೆನಿ ಪ್ರಕಾರ ಇದು ಐದು ದಿನದ ಪ್ರಯಾಣವಾಗಲಿದ್ದು, ಅಂದಾಜು 1,49,088 ರೂಪಾಯಿ ಚಾರ್ಜ್ ಆಗುತ್ತದೆ ಎಂದು ತಿಳಿಸಿತ್ತು. ಇದನ್ನು ಪ್ರಶಾಂತ್ ತಕ್ಷಣ ಓಲಾ ಕಂಪೆನಿಗೆ ತಿಳಿಸಿದರು. ಆದರೂ ಯಾವುದೇ ರೆಸ್ಪಾನ್ಸ್ ಬರಲಿಲ್ಲ. ಇದಾದ ಬಳಿಕ ಇನ್ನೋರ್ವ ವ್ಯಕ್ತಿ ಓಲಾ ಕಂಪೆನಿಗೆ ಟ್ವೀಟ್ ಮೂಲಕ ಈ ವಿಷಯ ತಿಳಿಸಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಓಲಾ ಸಂಸ್ಥೆ ತಾಂತ್ರಿಕ ದೋಷದಿಂದ ಹೀಗೆ ಆಗಿದೆ ಎಂದು ಹೇಳಿದೆ.

 

About sudina

Check Also

ದೇಶಕಂಡ ಅಪ್ರತಿಮ ನಾಯಕ, ಅಜಾತ ಶತ್ರು ಇನ್ನಿಲ್ಲ

ನವದೆಹಲಿ : ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ವಿಧಿವಶರಾಗಿದ್ದಾರೆ. ಏಮ್ಸ್ ಆಸ್ಪತ್ರೆಯಲ್ಲಿ ವಾಜಪೇಯಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!