Tuesday , October 16 2018
ಕೇಳ್ರಪ್ಪೋ ಕೇಳಿ
Home / Film News / ಶೃದ್ಧಾ ಶ್ರೀನಾಥ್ ಬಾಲಿವುಡ್ ಜರ್ನಿ ಶುರು…

ಶೃದ್ಧಾ ಶ್ರೀನಾಥ್ ಬಾಲಿವುಡ್ ಜರ್ನಿ ಶುರು…

ಬೆಂಗಳೂರು : ಯುಟರ್ನ್ ಬೆಡಗಿ ಶೃದ್ಧಾ ಶ್ರೀನಾಥ್ ಈಗ ದಕ್ಷಿಣ ಭಾರತದ ಬಹುತೇಕ ಸಿನೆಮಾರಂಗದಲ್ಲಿ ಮಿಂಚಿ ಮನಗೆದ್ದವರು. ಈಗ ಇದೇ ಬೆಡಗಿ ಬಾಲಿವುಡ್‍ಗೂ ಹಾರಿದ್ದಾರೆ. ಶೃದ್ಧಾ ಬಾಲಿವುಡ್‍ಗೆ ಹಾರಿರೋ ಸುದ್ದಿ ಹಳೆಯದಾದರೂ ಈ ಜರ್ನಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಅದು `ಮಿಲನ್ ಟಾಕೀಸ್’ ಚಿತ್ರದ ಶೂಟಿಂಗ್ ಮೂಲಕ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಟೈಗ್ಮಾನ್ಶು ದುಲಿಯಾ ಅವರ ಚಿತ್ರವಿದು. ಈ ಚಿತ್ರದಲ್ಲಿ ಶೃದ್ಧಾ ಶ್ರೀನಾಥ್ ಹಾಗೂ ಅಲಿ ಫೈಜಲ್ ನಾಯಕ ನಾಯಕಿ. ಈ ಶೂಟಿಂಗ್ ಸೋಮವಾರದಿಂದ ಶುರುವಾಗಿದೆ. ಲಕ್ನೋದ ಗೋಲಗಂಝ್‍ನಲ್ಲಿ ಶೂಟಿಂಗ್ ಆರಂಭವಾಗಿದೆ. ಈ ಮೂಲಕ ಶೃದ್ಧಾ ಬಿ ಟೌನ್ ಜರ್ನಿ ಕೂಡಾ ಶುರುವಾಗಿದೆ. ಈ ಖುಷಿಯನ್ನು ಶೃದ್ಧಾ ತನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಆಲ್ ದಿ ಬೆಸ್ಟ್ ಶೃದ್ಧಾ…

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!