Monday , June 25 2018
ಕೇಳ್ರಪ್ಪೋ ಕೇಳಿ
Home / Film News / ಬಂಗೀ ಜಂಪಿಂಗ್ : ಬಾಲಿವುಡ್ ನಟಿಗೆ ಗಂಭೀರ ಗಾಯ

ಬಂಗೀ ಜಂಪಿಂಗ್ : ಬಾಲಿವುಡ್ ನಟಿಗೆ ಗಂಭೀರ ಗಾಯ

ಮುಂಬೈ : ಸಾಹಸಿ ಕ್ರೀಡೆ ಬಂಗೀ ಜಂಪಿಂಗ್‍ನಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ನತಾಶಾ ಸೂರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ನತಾಶಾ ತೀವ್ರ ನಿಗಾಘಟಕದಲ್ಲಿದ್ದಾರೆ. ಮಾಜಿ ಮಿಸ್ ಇಂಡಿಯಾ ಹಾಗೂ ನಟಿ ತನ್ನ ಮುಂದಿನ ಚಿತ್ರ `ಬ ಬಾ ಬ್ಲ್ಯಾಕ್‍ಶೀಪ್’ಗೆ ಸಜ್ಜಾಗುತ್ತಿದ್ದರು. ಮನೀಶ್ ಪೌಲ್ ಈ ಚಿತ್ರದ ನಾಯಕ. ಇಂತಹ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಲಕ್ಷುರಿ ಬ್ರ್ಯಾಂಡ್ ಸ್ಟೋರ್‍ನ ಉದ್ಘಾಟನೆಗೆಂದು ನತಾಶಾ ಇಂಡೋನೇಷ್ಯಾಗೆ ಹೋಗಿದ್ದರು. ಕಾರ್ಯಕ್ರಮದ ಬಳಿಕ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ ಇವರು ಬಳಿಕ ಸಾಹಸ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಬಿದ್ದು ಇವರು ಗಾಯಗೊಂಡಿದ್ದಾರೆ.

About sudina

Check Also

ಅನುಪಮ್ ಖೇರ್ ಮನಮೋಹನ್ ಸಿಂಗ್… ವಾಜಪೇಯಿ ಪಾತ್ರವನ್ನು ನಿರ್ವಹಿಸುತ್ತಿರುವವರು ಯಾರು ಗೊತ್ತಾ…?

ಮುಂಬೈ : ಬಾಲಿವುಡ್ ನಟ ಅನುಪಮ್ ಖೇರ್ ಸದ್ಯ `ದಿ ಆಕ್ಸಿಡೆಂಟರ್ ಪ್ರೈಮಿನಿಸ್ಟರ್’ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿ ಇದ್ದಾರೆ. ಈ …

Leave a Reply

Your email address will not be published. Required fields are marked *

error: Content is protected !!