Wednesday , August 15 2018
ಕೇಳ್ರಪ್ಪೋ ಕೇಳಿ
Home / Interval / ರವೀನಾ ಟಂಡನ್‍ಗೆ ಕಾಟ ಕೊಟ್ಟಿದ್ದರು ಕೋಳಿ ಕಳ್ಳರು…!

ರವೀನಾ ಟಂಡನ್‍ಗೆ ಕಾಟ ಕೊಟ್ಟಿದ್ದರು ಕೋಳಿ ಕಳ್ಳರು…!

ಬಾಲಿವುಡ್ ನಟಿ ರವೀನಾ ಟಂಡನ್ ಬಾಂದ್ರಾದಲ್ಲಿ ಡಬ್ಬಲ್ ಬೆಡ್‍ರೂಮ್‍ನ ಮನೆಯೊಂದನ್ನು ಖರೀದಿಸಿದ್ದರು. ಈ ಮನೆ ಮಾಲಿಕರ ಬಳಿ 17 ಕೋಳಿಗಳಿದ್ದವು. ಮನೆ ಮಾರುವ ಸಂದರ್ಭದಲ್ಲಿ ಈ ಕೋಳಿಗಳನ್ನೂ ಆ ಮಾಲಿಕ ರವೀನಾ ಅವರಿಗೆ ಕೊಟ್ಟಿದ್ದರು. ಹೀಗಾಗಿ, ಮನೆ ಮತ್ತು ಕೋಳಿಗಳನ್ನು ನೋಡಿಕೊಳ್ಳಲು ರವೀನಾ ಅವರು ಕೆಲಸಗಾರರನ್ನೂ ನೇಮಿಸಿದ್ದರು. ಆದರೆ, ಕೆಲ ದಿನಗಳ ಬಳಿಕ ರವೀನಾ ತನ್ನ ಈ ಮನೆಗೆ ಹೋಗಿ ನೋಡಿದಾಗ 17 ಕೋಳಿಗಳಲ್ಲಿ ಕೆಲವೇ ಕೆಲವು ಕೋಳಿಗಳು ಮಾತ್ರ ಉಳಿದಿದ್ದವು… ಯಾಕೆ ಹೀಗೆ ಆಗುತ್ತಿದೆ ಎಂದು ರವೀನಾ ತನ್ನ ಕೆಲಸಗಾರನನ್ನು ಕೇಳುತ್ತಾರೆ. ಆಗ ಆತ ಹೇಳುತ್ತಾನೆ ಈ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಇದ್ದಾನೆ. ದಾದಾಗಿರಿ ಮಾಡುವ ಈತನಿಗೆ ಕೋಳಿ ಕದಿಯೋದೇ ಕೆಲಸ. ಆದರೆ, ಈತನ ಭಯದಿಂದ ಯಾರೂ ಅವನಿಗೆ ಎದುರು ಮಾತನಾಡುವುದಿಲ್ಲ ಅಂತ ಹೇಳ್ತಾನೆ. ಇದನ್ನು ಕೇಳಿ ರವೀನಾಗೆ ಕೋಪ ನೆತ್ತಿಗೇರಿತ್ತು. ಹೀಗಾಗಿ, ನೇರವಾಗಿ ರವೀನಾ ಹೋಗಿದ್ದು ಕೋಳಿ ಕದಿಯೋ ವ್ಯಕ್ತಿಯ ಬಳಿ. ಇಲ್ಲಿ ಆತನಿಗೆ ಸರಿಯಾಗಿಯೇ ಜಾಡಿಸಿದ್ದ ರವೀನಾ ತನ್ನ ಬಾಕಿ ಉಳಿದ ಕೋಳಿಗಳನ್ನು ಮನೆಗೆ ವಾಪಸ್ ತಂದರು…! ನೋಡಿ… ಹೇಗಿದೆ… ಆಪ್ತತೆ ಅಂದರೆ ಇದು…

About sudina

Check Also

ಟೆರರಿಸ್ಟ್ ಅಂತ ಸುನಿಲ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದ ಅಮೇರಿಕಾ ಪೊಲೀಸ್…!

ಯಾರಿಗಾದರೂ ಅಮೇರಿಕಾ ಪ್ರವಾಸ ಮಾಡೋದು ಅಂದರೆ ಅದೊಂದು ಹೆಮ್ಮೆ… ಇದರಲ್ಲಿ ಬಾಲಿವುಡ್ ಕಲಾವಿದರೂ ಹೊರತಾಗಿಲ್ಲ. ಆದ್ರೆ, ಹೀಗೆ ಅಮೇರಿಕಾಕ್ಕೆ ಹೋದಾಗ …

Leave a Reply

Your email address will not be published. Required fields are marked *

error: Content is protected !!