ಹೈದರಾಬಾದ್ : ಹಲವು ಫ್ಲಾಪ್ ಚಿತ್ರಗಳ ಮೂಲಕ ತೆಲುಗು ಫಿಲಂ ಇಂಡಸ್ಟ್ರಿ 2018ನ್ನು ಆರಂಭಿಸಿತ್ತು. ಆದರೆ, ಇದಾದ ಬಳಿಕ ಬಂದವಳೇ `ಭಾಗಮತಿ’. ಅನುಷ್ಕಾ ಶೆಟ್ಟಿ ಅಭಿನಯದ ಈ ಚಿತ್ರ ಸೂಪರ್ ಹಿಟ್ ಆಯ್ತು. ಆದರೆ, `ಭಾಗಮತಿ’ ಬಳಿಕ ಅನುಷ್ಕಾ ಯಾವೊಂದು ಪ್ರಾಜೆಕ್ಟ್ಗೂ ಸಹಿ ಹಾಕಿಲ್ಲ. ಯಾಕೆ ಹೀಗೆ ಅಂತ ಅವರ ಅಭಿಮಾನಿಗಳನ್ನು ಪ್ರಶ್ನೆಗಳು ಕಾಡಲಾರಂಭಿಸಿತ್ತು. ಈ ವೇಳೆ, ಬಂದ ಸುದ್ದಿ ಎಂದರೆ ಅನುಷ್ಕಾರ ಮದುವೆ ಸಿದ್ಧತೆ. ಹೌದು ಇದೇ ವರ್ಷ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ…
ಟಾಲಿವುಡ್ನಲ್ಲಿ ಅನುಷ್ಕಾ ಜೊತೆ ಬಾಹುಬಲಿ ನಟ ಪ್ರಭಾಸ್ ಹೆಸರು ಥಳುಕು ಹಾಕಿಕೊಂಡಿತ್ತು. ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಈಗಲೂ ಹರಿದಾಡುತ್ತಲೇ ಇದೆ. ಆದ್ರೆ, ಈ ಸುದ್ದಿಯನ್ನು ಇಬ್ಬರೂ ನಿರಾಕರಿಸುತ್ತಲೇ ಬರುತ್ತಿದ್ದಾರೆ. ಇದ್ರ ನಡುವೆ, ಅನುಷ್ಕಾ ಹೆತ್ತವರು ಮಾತ್ರ ಮಗಳಿಗೆ ಮದುವೆ ಮಾಡಬೇಕೆಂದು ಬಯಸಿದ್ದು, ಇದಕ್ಕೆ ತಯಾರಿಯನ್ನೂ ನಡೆಸುತ್ತಿದ್ದಾರೆ. ಜೊತೆಗೆ, ಮದುವೆಗೆ ಇರೋ ಅಡೆತಡೆಗಳ ನಿವಾರಣೆಗೆ ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಡುತ್ತಿದ್ದಾರೆ. ಹಿಮಾಲಯ ಸೇರಿದಂತೆ ವಿವಿಧ ಪವಿತ್ರ ದೇವಾಲಯಗಳಿಗೆ ದೇವಸೇನಾರನ್ನು ಕರೆದುಕೊಂಡು ಹೆತ್ತವರು ದೇವರ ದರ್ಶನ ಮಾಡಿಸುತ್ತಿದ್ದಾರೆ. ಇದೇ ವರ್ಷ ಮಗಳ ಮದುವೆ ಮುಗಿಸಬೇಕೆಂಬುದು ಹೆತ್ತವರ ಹೆಬ್ಬಯಕೆಯಾಗಿದೆಯಂತೆ. ಹೀಗಾಗಿ, ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನೂ ಮಾಡಿಸಲಾಗುತ್ತಿದೆ.
ಅನುಷ್ಕಾಗೆ ದೊಡ್ಡ ಫ್ಯಾನ್ ಫಾಲೋವರ್ಸ್ ಇದ್ದಾರೆ. ಇವರೆಲ್ಲಾ ಅನುಷ್ಕಾ ಜೋಡಿ ಆಗುವ ಆ ಅದೃಷ್ಟವಂತ ಯಾರು ಅಂತ ಕಾಯುತ್ತಿದ್ದಾರೆ….