Thursday , June 21 2018
ಕೇಳ್ರಪ್ಪೋ ಕೇಳಿ
Home / Film News / ಸಂಜುಗೆ ಶುರು ಕಂಟಕ….! ಟ್ರೇಲರ್ ನಲ್ಲಿರುವ `ಆ’ ದೃಶ್ಯಕ್ಕೆ ಆಕ್ಷೇಪ…

ಸಂಜುಗೆ ಶುರು ಕಂಟಕ….! ಟ್ರೇಲರ್ ನಲ್ಲಿರುವ `ಆ’ ದೃಶ್ಯಕ್ಕೆ ಆಕ್ಷೇಪ…

ನವದೆಹಲಿ : ಬಾಲಿವುಡ್ ನಟ ಸಂಜಯ್ ದತ್ ಜೀವನ ಕತೆ ಆಧರಿಸಿ ಬರುತ್ತಿರುವ `ಸಂಜು’ ಚಿತ್ರಕ್ಕೆ ಕಂಟಕ ಎದುರಾಗಿದೆ. ರಣಬೀರ್ ಕಪೂರ್ ಅಭಿನಯದ ರಾಜ್‍ಕುಮಾರ್ ಇರಾನಿ ನಿರ್ದೇಶನದ ಈ ಚಿತ್ರದ ವಿರುದ್ಧ ಈಗ ದೂರೊಂದು ದಾಖಲಾಗಿದೆ. ಟ್ರೇಲರ್‍ನಲ್ಲಿರುವ ಟಾಯ್ಲೆಟ್ ಲೀಕ್ ದೃಶ್ಯದ ಬಗ್ಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಸೆನ್ಸಾರ್ ಮಂಡಳಿಗೆ ದೂರು ಕೊಟ್ಟಿದ್ದಾರೆ.

`ಭಾರತದ ಜೈಲಿನಲ್ಲಿ ಕೈದಿಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಆದ್ರೆ, ಚಿತ್ರದಲ್ಲಿ ಜೈಲಿನ ಸ್ಥಿತಿಯನ್ನು ತುಂಬಾ ಕೀಳಾಗಿ ಚಿತ್ರೀಕರಿಸಲಾಗಿದೆ. ಟಾಯ್ಲೆಟ್ ಲೀಕ್ ಆಗುವಂತಹ ದೃಶ್ಯವನ್ನು ಟ್ರೇಲರ್‍ನಲ್ಲಿ ತೋರಿಸಲಾಗಿದೆ. ಇಂತಹ ಯಾವೊಂದು ಘಟನೆಯೂ ಭಾರತದ ಜೈಲಿನಲ್ಲಿ ಇದುವರೆಗೆ ನಡೆದಿರಲಿಕ್ಕಿಲ್ಲ. ನಾವು ಯಾವತ್ತೂ ಇಂತಹ ಸುದ್ದಿಯನ್ನು ಕೇಳಿರಲಿಲ್ಲ. ಗ್ಯಾಂಗ್‍ಸ್ಟಾರ್‍ಗಳ ಬಗ್ಗೆ ಬಂದಿರುವ ಹಲವು ಚಿತ್ರಗಳಲ್ಲೂ ಜೈಲಿನ ಇಂತಹ ಸನ್ನಿವೇಶವನ್ನು ಪ್ರಸ್ತಾಪಿಸಿಲ್ಲ’ ಎಂದು ಸಾಮಾಜಿ ಕಾರ್ಯಕರ್ತ ಪೃಥ್ವಿ ಮಾಸ್ಕೆ ಆರೋಪಿಸಿದ್ದಾರೆ. ಅಲ್ಲದೆ, ನೀವು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಚಿತ್ರ ಬಿಡುಗಡೆಗೆ ತಡೆ ಕೋರಿ ನಾವು ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ಅವರು ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

1993ರ ಮುಂಬೈ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಸಂಜಯ್ ದತ್ ಅವರ ಸನ್ನಿವೇಶವನ್ನು ವಿವರಿಸುವ ಸಂದರ್ಭದಲ್ಲಿ ಟಾಯ್ಲೆಟ್ ಲೀಕ್ ಆಗುವಂತಹ ದೃಶ್ಯವನ್ನು ತೋರಿಸಲಾಗಿದೆ.. ಟ್ರೇಲರ್‍ನಲ್ಲಿ ಈ ದೃಶ್ಯವಿದೆ. ಇನ್ನು, ಈ ಚಿತ್ರ ಬಹುತೇಕ ಇದೇ ತಿಂಗಳ 29 ರಿಲೀಸ್ ಆಗುವ ಸಾಧ್ಯತೆ ಇದೆ.

About sudina

Check Also

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ನೇಮಕ

ಬೆಂಗಳೂರು : ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಸಾರಥಿಯ ನೇಮಕವಾಗಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. …

Leave a Reply

Your email address will not be published. Required fields are marked *

error: Content is protected !!