Saturday , January 19 2019
ಕೇಳ್ರಪ್ಪೋ ಕೇಳಿ
Home / Film News / ಮತ್ತೆ ಒಂದಾದ ಜೋಡಿ… : ಮಾಧವನ್ ಚಿತ್ರಕ್ಕೆ ಕನ್ನಡತಿ ಶೃದ್ಧಾ ನಾಯಕಿ…

ಮತ್ತೆ ಒಂದಾದ ಜೋಡಿ… : ಮಾಧವನ್ ಚಿತ್ರಕ್ಕೆ ಕನ್ನಡತಿ ಶೃದ್ಧಾ ನಾಯಕಿ…

ಚೆನ್ನೈ : ತಮಿಳಿನ ಸೂಪರ್ ಹಿಟ್ ಚಿತ್ರದಲ್ಲಿ ಒಂದಾಗಿದ್ದ ಮಾಧವನ್ ಮತ್ತು ಶೃದ್ಧಾ ಶ್ರೀನಾಥ್ ಈಗ ಮತ್ತೊಂದು ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ವಿಕ್ರಮ್ ವೇದಾದ ಬಳಿಕ ಮಾಧವನ್ ಜೊತೆಗಿನ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿ ಶೃದ್ಧಾ ಆಯ್ಕೆಯಾಗಿದ್ದಾರೆ. ಈ ಹೊಸ ಚಿತ್ರದ ಹೆಸರು `ಮಾರಾ’.

ಈ ಫಿಲಂ ಅನ್ನು ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಗಿಬ್ರನ್ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿರುವ ಶೃದ್ಧಾ `ಚಿತ್ರದ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದು, ಜೂನ್ 18 ರ ನಂತರ ಶೂಟಿಂಗ್ ಆರಂಭವಾಗುವ ನಿರೀಕ್ಷೆ ಇದೆ. ಮಾಧವನ್ ಜೊತೆಗೆ ಮತ್ತೊಮ್ಮೆ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ’ ಎಂದು ಹೇಳಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!