Thursday , June 21 2018
ಕೇಳ್ರಪ್ಪೋ ಕೇಳಿ
Home / News NOW / ಬಂಟ್ವಾಳ : ವಿವಿಧ ಸುದ್ದಿಗಳ ಸಂಕ್ಷಿಪ್ತ ನೋಟ…

ಬಂಟ್ವಾಳ : ವಿವಿಧ ಸುದ್ದಿಗಳ ಸಂಕ್ಷಿಪ್ತ ನೋಟ…

ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ : ಕಾರ್ಮೆಲ್ ಪದವಿ ಪೂರ್ವ ಕಾಲೇಜು ಮೊಡಂಕಾಪು ಇಲ್ಲಿನ 2018-19 ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಕಾರ್ಮೆಲ್ ಪದವಿ ಕಾಲೇಜು ಪ್ರಾಂಶುಪಾಲ ವ.ಭ.ಸುಪ್ರಿಯ ಎ.ಸಿ ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು. ಈ ವೇಳೆ, ಶ್ರೇಷ್ಟ ನಾಯಕರಾದ ಗಾಂಧೀಜಿ, ಡಾ.ಅಬ್ದುಲ್ ಕಲಾಂ, ಮದರ್ ತೆರೇಜಾರಂತಹ ಮಹಾನ್ ವ್ಯಕ್ತಿತ್ವಗಳ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು ಎಂದು ಕರೆ ನೀಡಿದರು. ಪ್ರಾಂಶುಪಾಲರಾದ ವ.ಭ ನವೀನ ಎ.ಸಿ ಪ್ರಮಾಣ ವಚನ ಬೋಧಿಸಿದರು. ಸಂಘದ ಸಲಹೆಗಾರರಾದ ಭಗಿನಿ ರೋಜ್‍ವೆರಾ ಎ.ಸಿ, ಶ್ರೀಮತಿ ಶ್ರೀವಿದ್ಯಾ, ಸುರೇಶ್ ನಂದೊಟ್ಟು ಹಾಗೂ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷೆ ಜೆಸಿಕಾ ಸ್ವಾಗತಿಸಿ, ಶಫೀಕಾ ವಂದಿಸಿದರು. ಎಲ್ವೀಶಾ ಕಾರ್ಯಕ್ರಮ ನಿರೂಪಿಸಿದರು.
ಅಭಿನಂದನಾ ಸಮಾರಂಭ : ಕಳ್ಳಿಗೆ ಗ್ರಾಮ ಬಿಜೆಪಿ ಸಮಿತಿ ಹಾಗೂ ಕಳ್ಳಿಗೆ ಗ್ರಾಮಸ್ಥರ ಪರವಾಗಿ ಶಾಸಕರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ನೂತನ ಶಾಸಕ ರಾಜೇಶ್ ನಾಯ್ಕ್ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡರು. ಈ ವೇಳೆ, ಮಾತನಾಡಿದ ಶಾಸಕರು ಬಂಟ್ವಾಳದ ಅಭಿವೃದ್ಧಿಗೆ ಹಾಗೂ ಜನರ ಸೇವೆಗೆ ನನ್ನ ಬದುಕನ್ನು ಮೀಸಲಿಡುವೆ ಎಂದು ಹೇಳಿದರು.
ಮುಖ್ಯಅತಿಥಿಯಾಗಿ ಆಗಮಿಸಿದ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಜಗತ್ತು ಇಂದು ಭಾರತವನ್ನು ಗೌರವಿಸುತ್ತಿದ್ದು, ಇದಕ್ಕೆ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಆಡಳಿತವೇ ಕಾರಣ ಎಂದು ಹೇಳಿದರು. ಕಳ್ಳಿಗೆ ಗ್ರಾಮಸ್ಥರು ಹಿರಿಯರ ನೇತೃತ್ವದಲ್ಲಿ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಯ್ತು. ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕ್ಷೇತ್ರ ಪ್ರ. ಕಾರ್ಯದರ್ಶಿ ರಾಮ್‍ದಾಸ್ ಬಂಟ್ವಾಳ್, ಕಳ್ಳಿಗೆ ಗ್ರಾ.ಪಂ. ಉಪಾಧ್ಯಕ್ಷ ಪುರುಷ ಎನ್. ಸಾಲ್ಯಾನ್, ಕಳ್ಳಿಗೆ ಶಕ್ತಿ ಕೇಂದ್ರ ಪ್ರಭಾರಿ ಪುರುಷೋತ್ತಮ ಶೆಟ್ಟಿ ವಾಮದಪದವು, ಬೂತ್ ಸಶಕ್ತೀಕರಣ ಪ್ರಮುಖ್ ಶಿವಪ್ಪ ಗೌಡ ಸರಪಾಡಿ, ಮನೋಜ್ ವಳವೂರು, ದಾಮೋದರ ನೆತ್ರಕೆರೆ, ಕಳ್ಳಿಗೆ ಪಂಚಾಯತ್ ಸದಸ್ಯರಾದ ಯಶೋದಾ ಜಾರಂದಗುಡ್ಡೆ, ರೇವತಿ ಮಾಡಂಗೆ, ವಿಮಲಾ ಬೆಂಜನಪದವು ಉಪಸ್ಥಿತರಿದ್ದರು. ಸಜಿಪಮುನ್ನೂರು ಶಕ್ತಿಕೇಂದ್ರ ಪ್ರ.ಕಾರ್ಯದರ್ಶಿ ಮನೋಹರ ಕಂಜತ್ತೂರು ಸ್ವಾಗತಿಸಿದರು. ದೇವಿಪ್ರಸಾದ್ ಎಂ. ಪ್ರಸ್ತಾವಿಸಿದರು. ಮಹೇಶ್ ಚಂದ್ರಿಗೆ ವಂದಿಸಿದರು.

ವರದಿ : ಯಾದವ್ ಬಂಟ್ವಾಳ್

About sudina

Check Also

ಪಣಂಬೂರು ಕಡಲ ಕಿನಾರೆಯಲ್ಲಿ ಸುಂಟರ ಗಾಳಿ…! : ಇಲ್ಲಿದೆ ವೀಡಿಯೋ

ಮಂಗಳೂರು : ಪಣಂಬೂರು ಸಮುದ್ರ ಕಿನಾರೆಯಲ್ಲಿ ಸುಂಟರಗಾಳಿ ಕಾಣಿಸಿಕೊಂಡು ಭೀತಿಯ ವಾತಾವರಣ ಸೃಷ್ಟಿಸಿತ್ತು. ಈ ಸುಂಟರಗಾಳಿಯಿಂದ ಕಡಲ ತೀರದಲ್ಲಿ ಇದ್ದ …

Leave a Reply

Your email address will not be published. Required fields are marked *

error: Content is protected !!