Thursday , June 21 2018
ಕೇಳ್ರಪ್ಪೋ ಕೇಳಿ
Home / Gossip / ನ್ಯೂಯಾರ್ಕ್​ನಲ್ಲಿ ಪೇಮ ಪತಂಗಗಳ ಸುತ್ತಾಟ…

ನ್ಯೂಯಾರ್ಕ್​ನಲ್ಲಿ ಪೇಮ ಪತಂಗಗಳ ಸುತ್ತಾಟ…

ನ್ಯೂಯಾರ್ಕ್ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಗಾಯಕ ನಿಕ್ ಜೊನಾಸ್ ನಡುವೆ ಪ್ರೀತಿ ಪ್ರೇಮದಂತಹ ಸುಂದರ ಬಾಂದವ್ಯ ಚಿಗುರೊಡೆದಿದೆ ಎನ್ನುವುದು ಹಳೇ ಸುದ್ದಿ. ಆದ್ರೆ, ಇತ್ತೀಚಿನ ದಿನಗಳಲ್ಲಿ ಈ ಸುದ್ದಿ ಇನ್ನಷ್ಟು ಬೇಗ ಪಡೆದುಕೊಂಡಿದೆ. ಇದಕ್ಕೆ ಸರಿಯಾಗಿ ಎರಡು ವಾರದಿಂದ ಇಬ್ಬರು ಒಟ್ಟಿಗೆ ಕಾಣಿಸಿಕೊಂಡು ಈ ಸುದ್ದಿಗೆ ಇನ್ನಷ್ಟು ರೆಕ್ಕೆ ಪುಕ್ಕ ತರುತ್ತಿದ್ದಾರೆ. ಇದರ ನಡುವೆ, ಮಂಗಳವಾರ ರಾತ್ರಿ ಮತ್ತೆ ಈ ‘ಜೋಡಿ’ ಜೊತೆಯಾಗಿ ಊಟ ಸವಿದಿದೆ.


ಕಳೆದ ಹಲವು ದಿನಗಳಿಂದ ಇವರಿಬ್ಬರ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಜೊತೆಗೆ ಇನ್ಸ್​​ಸ್ಟ್ರಾಗ್ರಾಂನಲ್ಲಿ ಇವರಿಬ್ಬರು ಪರಸ್ಪರ ಹೃದಯವನ್ನು ವಿನಿಮಯ ಮಾಡಿಕೊಂಡವರಂತೆ ಕಮೆಂಟ್ಸ್​ಗಳನ್ನು ಹಾಕುತ್ತಿದ್ದಾರೆ. ಹೀಗಾಗಿ, ಅಭಿಮಾನಿಗಳ ಕುತೂಹಲ ಇನ್ನಷ್ಟು ಜಾಸ್ತಿಯಾಗಿದೆ. ಜೊತೆಗೆ, ಬಿಸಿಬಿಸಿ ಗಾಸಿಪ್​ಗೂ ಕಾರಣವಾಗುತ್ತಿದೆ. ಅಭಿಮಾನಿಗಳು ಕೂಡಾ ಇವರಿಗೆ ‘ನಿಕ್​ಯಾಂಕಾ’ ಎಂದು ಹೆಸರಿಟ್ಟಿದ್ದಾರೆ.

About sudina

Check Also

ಇದೇ ವರ್ಷ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಆ್ಯಮಿ ಜಾಕ್ಸನ್…?

2017ರಲ್ಲಿ ವಿರಾಟ್ ಮತ್ತು ಅನುಷ್ಕಾ ಶರ್ಮಾ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಇಟಲಿಯಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಇದಾದ ಬಳಿಕ ಬಾಲಿವುಡ್‍ನ …

Leave a Reply

Your email address will not be published. Required fields are marked *

error: Content is protected !!