ಮಂಗಳೂರು : ತನ್ನ ನಿಜ ಹೆಸರನ್ನು ಮರೆಮಾಚಿ, ತಾನು ಅನಾಥ ಎಂದು ಹೇಳಿ ಯುವತಿಯನ್ನು ವರಿಸಿದ್ದಾನೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಯುವಕನೊಬ್ಬ ಈಗ ಪತ್ನಿ ಕಡೆಯಿಂದಲೇ ಧರ್ಮದೇಟು ತಿಂದಿದ್ದಾನೆ. ಸುಳ್ಯ ಮೂಲದ ಸಯ್ಯದ್ (28) ಏಟು ತಿಂದ ಯುವಕ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲದಲ್ಲಿ ಈ ಘಟನೆ ನಡೆದಿದೆ.
ಈತ ತನ್ನನ್ನು ಅರುಣ್ ಪೂಜಾರಿ ಎಂದು ಹೇಳಿಕೊಂಡು ಯುವತಿಯನ್ನು ವರಿಸಿದ್ದ. ಆದರೆ, ಇತ್ತೀಚಿಗಷ್ಟೇ ಈತನ ಅಸಲಿ ಮುಖ ಬಯಲಾಗಿತ್ತು. ಬ್ಯಾಂಕ್ ದಾಖಲೆಯಲ್ಲಿ ಈತನ ನಿಜ ಹೆಸರು ನೋಡಿ ಮನೆಯವರು ಕಂಗಾಲಾಗಿದ್ದರು. ಅದೂ ಅಲ್ಲದೆ, ಈತ ಹೆಂಡತಿಗೆ ಹಿಂಸೆ ನೀಡುತ್ತಿದ್ದನಂತೆ. ಈತನ ನಿಜ ಬಣ್ಣ ಬಯಲಾಗುತ್ತಿದ್ದಂತೆಯೇ ಯುವತಿ ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ, ಪೊಲೀಸರು ಎಚ್ಚರಿಕೆ ಕೊಟ್ಟು ಈತನನ್ನು ಕಳುಹಿಸಿದ್ದರು. ಇದಾದ ಬಳಿಕ ಪತ್ನಿಯಿಂದ ದೂರವೇ ಇದ್ದ ಈತ ನಿನ್ನೆ ಮನೆಗೆ ಬಂದು ದುಡ್ಡಿಗೆ ಬೇಡಿಕೆ ಇಟ್ಟಿದ್ದನಂತೆ. ಇದರಿಂದ ನೊಂದ ಹೆಂಡತಿ ಚೆನ್ನಾಗಿ ಬಾರಿಸಿದ್ದಾರೆ. ಈ ವೀಡಿಯೋ ಈಗ ಜಿಲ್ಲೆಯಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣ, ಫೇಸ್ಬುಕ್ನಲ್ಲಿ ಎಲ್ಲಾ ಹರಿದಾಡುತ್ತಿದೆ… ಕೈಗೆ ಸಿಕ್ಕ ಸಯ್ಯದ್ನನ್ನು ಮನೆಯವರು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
