Monday , August 20 2018
ಕೇಳ್ರಪ್ಪೋ ಕೇಳಿ
Home / Film News / ಒಂದು ಕಾರು… ಎರಡು ಆಕ್ಸಿಡೆಂಟ್… ಕಾರಿಗೆ ಏನೂ ಆಗಿಲ್ಲ…! : ಇದಕ್ಕೆ ವರ್ಮಾ ಕೊಟ್ಟ ಉತ್ತರವೇನು ಗೊತ್ತಾ…?

ಒಂದು ಕಾರು… ಎರಡು ಆಕ್ಸಿಡೆಂಟ್… ಕಾರಿಗೆ ಏನೂ ಆಗಿಲ್ಲ…! : ಇದಕ್ಕೆ ವರ್ಮಾ ಕೊಟ್ಟ ಉತ್ತರವೇನು ಗೊತ್ತಾ…?

ಮುಂಬೈ : ಬಾಲಿವುಡ್ ನಟ ರಿತೀಶ್ ದೇಶ್​ಮುಖ್ ಟ್ವಿಟರ್​ನಲ್ಲಿ ಒಂದು ವೀಡಿಯೋ ಶೇರ್ ಮಾಡ್ಕೊಂಡಿದ್ದರು. ಅದರಲ್ಲಿ ಬಿಳಿಯ ಕಾರೊಂದು ಎಡಕ್ಕೆ ಟರ್ನ್ ಪಡೆಯಲು ಯತ್ನಿಸುತ್ತಿತ್ತು. ಈ ವೇಳೆ, ಹಿಂದಿನಿಂದ ಬಂದದ್ದು ದೊಡ್ಡ ಟ್ರಕ್. ಎಡಕ್ಕೆ ತಿರುಗುವ ಕಾರನ್ನು ತಪ್ಪಿಸುವ ಸಲುವಾಗಿ ಈ ಟ್ರಕ್ ಕಾರನ್ನು ಓವರ್ ಟೇಕ್ ಮಾಡಿತ್ತು… ಅಷ್ಟೇ… ಮತ್ತೆ ಪಲ್ಟಿಯಾಗಿತ್ತು. ಆದರೆ, ಬಿಳಿ ಕಾರು ಮಾತ್ರ ಎಡಕ್ಕೆ ಹೋಗುವ ಯತ್ನದಲ್ಲೇ ಇತ್ತು. ಆಗ ಹಿಂದಿನಿಂದ ಮತ್ತೊಂದು ಟ್ರಕ್ ಬಂದು ಅದೂ ಅಪಘಾತಕ್ಕೆ ಗುರಿಯಾಯ್ತು… ಆದರೆ, ಕಾರಿಗೆ ಒಂದು ಸಣ್ಣ ಸ್ಕ್ರ್ಯಾಚ್ ಕೂಡಾ ಆಗಿರಲಿಲ್ಲ…


ಈ ಟ್ವೀಟ್ ಗೆ ಸಾಕಷ್ಟು ಜನ ಅವರದ್ದೇ ಆದ ಪ್ರತಿಕ್ರಿಯೆ ಕೊಟ್ಟಿದ್ದರು. ಆದರೆ, ನಿರ್ದೇಶಕ ರಾಮ್​ಗೋಪಾಲ್ ವರ್ಮಾ ಅವರು ಮಾತ್ರ ತುಂಬಾ ಡಿಫ್ರೆಂಟ್ ಆಗಿಯೇ ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದೇನೆಂದರೆ, ಆ ಬಿಳಿ ಕಾರನ್ನು  ಒಂದು ಸುಂದರ ಹುಡುಗಿ ಡ್ರೈವ್ ಮಾಡುತ್ತಿದ್ದದ್ದೇ ಈ ಅಪಘಾತಕ್ಕೆ ಕಾರಣ ಎಂಬರ್ಥದಲ್ಲಿ ವರ್ಮಾ ಟ್ವೀಟ್ ಮಾಡಿದ್ದಾರೆ…

About sudina

Check Also

ಕೊನೆಗೂ ಈಡೇರಿತು ತ್ರಿಶಾ ಕಂಡಿದ್ದ ಬಹು ದಿನಗಳ ಕನಸು…

ಚೆನ್ನೈ : ಖ್ಯಾತ ನಟಿ ತ್ರಿಶಾ ಈಗ ಸಖತ್ ಖುಷಿಯಲ್ಲಿದ್ದಾರೆ. ಅವರ ಆಸೆಯೊಂದು ಕೊನೆಗೂ ಕೈಗೂಡಿದೆ… ದಕ್ಷಿಣ ಭಾರತ ಬಹುತೇಕ …

Leave a Reply

Your email address will not be published. Required fields are marked *

error: Content is protected !!