Wednesday , December 12 2018
ಕೇಳ್ರಪ್ಪೋ ಕೇಳಿ
Home / Psychology / ಪ್ರಾಣಿಗಳೂ ಕನಸು ಕಾಣುತ್ತವೆ…!

ಪ್ರಾಣಿಗಳೂ ಕನಸು ಕಾಣುತ್ತವೆ…!

ಕನಸು ಅನ್ನೋದು ಸಹಜ. ಮನುಷ್ಯನೊಬ್ಬ ಒಂದು ರಾತ್ರಿ 1 ರಿಂದ 7 ರಷ್ಟು ಕನಸು ಕಾಣುತ್ತಾನೆ. ಕನಿಷ್ಠ ಒಂದರಿಂದ ಎರಡು ಗಂಟೆಯಷ್ಟು ಕನಸು ಮನುಷ್ಯನಿಗೆ ಬೀಳುತ್ತದೆ. ಆದ್ರೆ, ಬರೀ ಮನುಷ್ಯರಷ್ಟೇ ಕನಸು ಕಾಣ್ತಾರಾ…? ಖಂಡಿತಾ ಇಲ್ಲ… ಪ್ರಾಣಿಗಳಿಗೂ ಕನಸು ಬೀಳುತ್ತವೆ…! ನೀವು ಇದನ್ನು ಮನೆಯನ್ನೇ ಕಾಣಬಹುದು.

ಮನೆಯಲ್ಲಿರುವ ನಾಯಿ ಮತ್ತು ಬೆಕ್ಕು ಮಲಗಿದ್ದಾಗ ಅವುಗಳು ಕನಸು ಕಾಣುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಬಹುತೇಕ ಎಲ್ಲಾ ಪ್ರಾಣಿಗಳೂ ಮಲಗಿದಾಗಲೂ ಅವುಗಳ ಮೆದುಳಿನಲ್ಲಿ ಕನಸಿನ ಏರಿಳಿತಗಳು ನಡೆಯುತ್ತವೆ. ಅದರಲ್ಲೂ ನಾಯಿ ಮತ್ತು ಬೆಕ್ಕು ನಿದ್ದೆಯಲ್ಲಿ ಓಡುವ ರೀತಿಯಲ್ಲಿ ಕೈಕಾಲುಗಳನ್ನು ಆಡಿಸುತ್ತವೆ. ಆಗ ಖಂಡಿತವಾಗಿಯೂ ಈ ನಾಯಿ ಅಥವಾ ಬೆಕ್ಕು ಕನಸಿನಲ್ಲಿ ಓಡುತ್ತದೆ ಎಂದು ಗೊತ್ತಾಗುತ್ತದೆ.

ರಾಹುಲ್ ರೋಷನ್ ಸಿಕ್ವೇರಾ, ಕತಾರ್.

About sudina

Leave a Reply

Your email address will not be published. Required fields are marked *

error: Content is protected !!