ಮುಂಬೈ : ಬಾಲಿವುಡ್ ನಲ್ಲಿ ಅರ್ಜುನ್ ಕಪೂರ್ ಮತ್ತು ಪರಿಣಿತಿ ಛೋಪ್ರಾ ಸಹಕಲಾವಿದರು ಎನ್ನುವುದಕ್ಕಿಂತಲೂ ಹೆಚ್ಚಾಗಿ ಒಳ್ಳೆಯ ಸ್ನೇಹಿತರು. ಸದ್ಯ ಇವರಿಬ್ಬರು `ನಮಸ್ತೇ ಇಂಗ್ಲೆಂಡ್’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಲಂಡನ್ನಲ್ಲಿ ಈ ಶೂಟಿಂಗ್ ಸಂದರ್ಭದಲ್ಲಿ ಈ ಇಬ್ಬರು ಸ್ನೇಹಿತರು ಒಂದಷ್ಟು ಖುಷಿಯಾಗಿ ಕಾಲ ಕಳೆದಿದ್ದಾರೆ. ಜೊತೆಗೆ, ಈ ಖುಷಿಯ ಫನ್ನಿ ವೀಡಿಯೋವನ್ನೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.