Thursday , June 21 2018
ಕೇಳ್ರಪ್ಪೋ ಕೇಳಿ
Home / News NOW / ಜೂಡೋದಲ್ಲಿ ಗ್ರಾಮೀಣ ಪ್ರತಿಭೆಯ ಸಾಧನೆ

ಜೂಡೋದಲ್ಲಿ ಗ್ರಾಮೀಣ ಪ್ರತಿಭೆಯ ಸಾಧನೆ

ಬಂಟ್ವಾಳ : ದ.ಕ. ಜಿಲ್ಲೆಯ ಮೊಟ್ಟ ಮೊದಲ ಮಹಿಳಾ ಜುಡೊಕಾ ಆಗಿ ತಾಲೂಕಿನ ಮುಡಿಪು ನಿವಾಸಿ ವೆನಿಲ್ಲಾ ಮಣಿಕಂಠ ಹೊರಹೊಮ್ಮಿದ್ದಾರೆ. ಜೂಡೋ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ಕಳೆದ ಏಪ್ರಿಲ್ 28ರಂದು ಶಿವಮೊಗ್ಗದ ಸಾಗರ ತಾಲೂಕಿನ ಆನಂದಪುರಂನಲ್ಲಿ ಆಲ್ ಇಂಡಿಯಾ ಬ್ಲ್ಯಾಕ್‍ಬೆಲ್ಟ್ ಮತ್ತು ಎನ್‍ಡಿಐಒ ಪರೀಕ್ಷೆ ನಡೆದಿದ್ದು, ಅದರಲ್ಲಿ ವೆನಿಲ್ಲಾ ಮಣಿಕಂಠವರು ಬ್ಲ್ಯಾಕ್ ಬೆಲ್ಟ್‍ನಲ್ಲಿ ತೇರ್ಗಡೆ ಹೊಂದುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಈ ಸಾಧನೆ ಜೂಡೋದಲ್ಲಿ ಅತ್ಯಂತ ಕಷ್ಟಕರವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಿಂದ ಮೊದಲ ಬಾರಿಗೆ ಬ್ಲ್ಯಾಕ್ ಬೆಲ್ಟ್ ಪಡೆದ ಹುಡುಗಿ ಇವರಾಗಿದ್ದಾರೆ. ವೆನಿಲ್ಲಾ ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ತರಬೇತಿ ಪಡೆಯುತ್ತಿದ್ದು ರಾಜೇಶ್ ಬ್ರಹ್ಮರಕೂಟ್ಲು ಅವರ ಶಿಷ್ಯೆಯಾಗಿದ್ದಾರೆ. ಮುಡುಪುವಿನ ನೀಲಕಂಠ ಹಾಗೂ ಸುಮತಿ ದಂಪತಿಗಳ ಪುತ್ರಿಯಾಗಿರುವ ಈಕೆಯ ಸಾಧನೆಗೆ ಪೊಳಲಿ ಶ್ರೀರಾಮಕೃಷ್ಣ ತಪೋವನದ ವಿವೇಕಚೈತನ್ಯಾನಂದ ಸ್ವಾಮೀಜಿ ಹಾಗೂ ಗ್ರ್ಯಾಂಡ್ ಮಾಸ್ಟರ್ ಇಸ್ರೇಲ್ ಅವರು ಅಭಿನಂದಿಸಿದ್ದಾರೆ.

ವರದಿ : ಯಾದವ್, ಬಿ.ಸಿ.ರೋಡ್

About sudina

Check Also

ಪಣಂಬೂರು ಕಡಲ ಕಿನಾರೆಯಲ್ಲಿ ಸುಂಟರ ಗಾಳಿ…! : ಇಲ್ಲಿದೆ ವೀಡಿಯೋ

ಮಂಗಳೂರು : ಪಣಂಬೂರು ಸಮುದ್ರ ಕಿನಾರೆಯಲ್ಲಿ ಸುಂಟರಗಾಳಿ ಕಾಣಿಸಿಕೊಂಡು ಭೀತಿಯ ವಾತಾವರಣ ಸೃಷ್ಟಿಸಿತ್ತು. ಈ ಸುಂಟರಗಾಳಿಯಿಂದ ಕಡಲ ತೀರದಲ್ಲಿ ಇದ್ದ …

Leave a Reply

Your email address will not be published. Required fields are marked *

error: Content is protected !!