Thursday , June 21 2018
ಕೇಳ್ರಪ್ಪೋ ಕೇಳಿ
Home / Film News / ಗೋವಿಂದರನ್ನು ಭೇಟಿಯಾದ ಡ್ಯಾನ್ಸಿಂಗ್ ಅಂಕಲ್… : ಹೇಗಿತ್ತು ಗೊತ್ತಾ ಆ ಕ್ಷಣ…?

ಗೋವಿಂದರನ್ನು ಭೇಟಿಯಾದ ಡ್ಯಾನ್ಸಿಂಗ್ ಅಂಕಲ್… : ಹೇಗಿತ್ತು ಗೊತ್ತಾ ಆ ಕ್ಷಣ…?

ಮುಂಬೈ : ಸಾಮಾಜಿಕ ಜಾಲತಾಣದಿಂದಾಗಿ ಇತ್ತೀಚೆಗೆ ಕೆಲವರು ರಾತ್ರಿ ಹಗಲಾಗೋದ್ರಲ್ಲಿ ಫೇಮಸ್ ಆಗ್ತಾರೆ… ಅದರಲ್ಲಿ ಈ ಡ್ಯಾನ್ಸಿಂಗ್ ಅಂಕಲ್ ಕೂಡಾ ಒಬ್ಬರು. ಇವ್ರ ಹೆಸರು ಸಂಜೀವ್ ಶ್ರೀವಾತ್ಸವ್. ಇವರು ತಮ್ಮ ಡ್ಯಾನ್ಸ್ ಮೂಲಕವೇ ಈಗ ಸುದ್ದಿಯಾಗಿದ್ದರು. ಸಾಮಾಜಿಕ ಜಾಲತಾಣ ಸೇರಿದಂತೆ ದೇಶಾದ್ಯಂತ ಇವರೇ ಸದ್ದು ಮಾಡಿದ್ದರು.


ಮಧ್ಯಪ್ರದೇಶದಲ್ಲಿ ತನ್ನ ಸಂಬಂಧಿಕರೊಬ್ಬರ ಮದುವೆ ಸಮಾರಂಭದಲ್ಲಿ ಇವರು ಮಾಡಿದ್ದ ಡ್ಯಾನ್ಸ್ ಒಂದು ಹವಾವನ್ನೇ ಕ್ರಿಯೇಟ್ ಮಾಡಿತ್ತು. ಅದರಲ್ಲೂ ನಟ ಗೋವಿಂದ ಶೈಲಿಯಲ್ಲಿ ಇವರು ಡ್ಯಾನ್ಸ್ ಮಾಡಿದ್ದರು. ಈಗ ಇದೇ ಸಂಜೀವ್ ಅವರ ಕನಸು ಈಡೇರಿದೆ. ಅದು ನಟ ಗೋವಿಂದರನ್ನು ಭೇಟಿಯಾಗುವುದು. ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಸಂಜೀವ್ ಗೋವಿಂದರನ್ನು ಭೇಟಿಯಾಗಿದ್ದರು ಮತ್ತು ತಮ್ಮ ನೆಚ್ಚಿನ ನಟನೊಂದಿಗೆ ಡ್ಯಾನ್ಸ್ ಕೂಡಾ ಮಾಡಿ ಗಮನ ಸೆಳೆದಿದ್ದರು. ಇವರಿಬ್ಬರ ಡ್ಯಾನ್ಸ್ ಗೆ ಜನರೆಲ್ಲಾ ಸಂಭ್ರಮಿಸಿದ್ದರು.

About sudina

Check Also

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ನೇಮಕ

ಬೆಂಗಳೂರು : ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಸಾರಥಿಯ ನೇಮಕವಾಗಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. …

Leave a Reply

Your email address will not be published. Required fields are marked *

error: Content is protected !!