Tuesday , October 16 2018
ಕೇಳ್ರಪ್ಪೋ ಕೇಳಿ
Home / Film News / ಅಮೇರಿಕಾದಲ್ಲಿ ಭಿಕ್ಷೆ ಬೇಡಿದ್ದರು ಸಂಜಯ್ ದತ್…!

ಅಮೇರಿಕಾದಲ್ಲಿ ಭಿಕ್ಷೆ ಬೇಡಿದ್ದರು ಸಂಜಯ್ ದತ್…!

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಅಭಿನಯದ ‘ಸಂಜು’ ಚಿತ್ರ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ರಾಜ್​ಕುಮಾರ್ ಇರಾನಿ ನಿರ್ದೇಶನದ ಈ ಚಿತ್ರ ಬಿಡುಗಡೆಗೂ ಮುನ್ನವೇ ಹವಾ ಕ್ರಿಯೇಟ್ ಮಾಡುತ್ತಿದೆ. ಜೊತೆಗೆ, ಸಂಜಯ್ ದತ್ ಜೀವನದ ಬಗೆಗಿನ ಕೆಲ ಅಪರೂಪದ ಮಾಹಿತಿಯನ್ನು ಈ ಹೊರಹಾಕುತ್ತಿದೆ. ಸದ್ಯ ಬಿಡುಗಡೆಯಾಗಿರುವ ಎರಡು ಪೋಸ್ಟರ್​ಗಳು ಸಂಜೂ ಬದುಕಿನ ಇನ್ನೊಂದಷ್ಟು ರಹಸ್ಯಗಳ ಬಗ್ಗೆ ಬೆಳಕು ಚೆಲ್ಲಿದೆ.


ಸಂಜಯ್ ದತ್ ಡ್ರಗ್ ಅಡಿಕ್ಟ್ ಆಗಿದ್ದ ಸಂದರ್ಭದಲ್ಲಿ ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಈ ಚಿಕಿತ್ಸಾ ಕೇಂದ್ರದಿಂದ ದತ್ ಓಡಿ ಹೋಗಿದ್ದರು. ಜೊತೆಗೆ, ನಗರದ ವಿವಿಧ ಭಾಗದಲ್ಲಿ ಇರುವ ಸ್ನೇಹಿತರನ್ನು ಭೇಟಿಯಾಗಲು ಹೋಗಲು ಬಸ್ ಟಿಕೆಟ್​ಗಾಗಿ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡಿದ್ದರಂತೆ…! ಈ ಚಿತ್ರದಲ್ಲಿ ರಣಬೀರ್ ಕಪೂರ್ ಸಂಜಯ್ ದತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಮನೀಷಾ ಕೊಯಿರಲಾ ದತ್ ತಾಯಿ ನರ್ಗೀಸ್ ಪಾತ್ರದಲ್ಲಿ ಮಿಂಚಿದ್ದಾರೆ.

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!