Monday , July 23 2018
ಕೇಳ್ರಪ್ಪೋ ಕೇಳಿ
Home / Film News / 20 ವರ್ಷದ ಬಳಿಕ ಒಂದಾಗುತ್ತಿದ್ದಾರೆ ಮಾಧುರಿ, ಸಂಜಯ್ ದತ್…! : ಮಾಜಿ ಪ್ರೇಮಿಗಳನ್ನು ಒಂದಾಗಿಸುತ್ತಿದೆ `ಕಳಂಕ್’…!

20 ವರ್ಷದ ಬಳಿಕ ಒಂದಾಗುತ್ತಿದ್ದಾರೆ ಮಾಧುರಿ, ಸಂಜಯ್ ದತ್…! : ಮಾಜಿ ಪ್ರೇಮಿಗಳನ್ನು ಒಂದಾಗಿಸುತ್ತಿದೆ `ಕಳಂಕ್’…!

ಮುಂಬೈ : ಬಾಲಿವುಡ್ ಲೋಕದ ಬಗ್ಗೆ ಗೊತ್ತಿರುವವರಿಗೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ ನಡುವಣ ಸಂಬಂಧದ ಬಗೆಗೂ ಗೊತ್ತಿರುತ್ತದೆ. ಒಂದು ಕಾಲದಲ್ಲಿ ಈ ಜೋಡಿ ಆನ್‍ಸ್ಕ್ರೀನ್ ಮತ್ತು ಆಫ್‍ಸ್ಕ್ರೀನ್ ಎರಡರಲ್ಲೂ ಸುದ್ದಿ ಮಾಡಿತ್ತು. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಈ ಜೋಡಿ ಹಲವು ಕಡೆ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಗಾಸಿಪ್ ಕಾಲಂಗೆ ಆಹಾರವಾಗಿದ್ದರು. ಅದರಲ್ಲೂ ಇವರಿಬ್ಬರು ಪ್ರೀತಿಗೆ ಬಿದ್ದಿದ್ದು, ಇನ್ನೇನು ಮದ್ವೆ ಆಗಿಯೇ ಬಿಡುತ್ತಾರೆ ಎಂಬ ಮಟ್ಟಕ್ಕೆ ಸುದ್ದಿ ಹಬ್ಬಿತ್ತು. ಮಾಧುರಿ ಕೂಡಾ ಪ್ರತಿ ಸಂದರ್ಶನದಲ್ಲಿ ಸಂಜಯ್ ಬಗ್ಗೆ ಏನಾದರೂ ಮಾತನಾಡುತ್ತಲೇ ಇದ್ದರು. ಸಂಜಯ್ ಕೂಡಾ ಹಾಗೆಯೇ… ಪ್ರತಿ ಸಂದರ್ಶನದಲ್ಲಿ ಸಂಜಯ್ ಮತ್ತು ಮಾಧುರಿ ನಡುವಣ ಸಂಬಂಧದ ಬಗ್ಗೆ ಪ್ರಶ್ನೆಗಳು ಬರುತ್ತಲೇ ಇದ್ದವು. ಇದಕ್ಕೆ ಸರಿಯಾಗಿ ಈ ಜೋಡಿ ಕೂಡಾ ತಾವಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದೇವೆ ಎಂದು ಬಿಂಬಿಸುವ ರೀತಿಯಲ್ಲೇ ಕಾಣಿಸಿಕೊಳ್ಳುತ್ತಿದ್ದರು… ಆದ್ರೆ, 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಸಂಬಂಧ ಸಂಜಯ್ ಜೈಲು ಸೇರಿದ ಬಳಿಕ ಈ ಲವ್ ಸ್ಟೋರಿಗೆ ಡಿಫ್ರೆಂಟ್ ತಿರುವು ಸಿಕ್ಕಿತ್ತು. ಅಲ್ಲಿ ತನಕ ಸಂಜಯ್ ಎಂದರೆ ಜೀವ ಬಿಡುತ್ತಿದ್ದ ಮಾಧುರಿ ಜೈಲು ಸೇರಿದ `ಖಳ್‍ನಾಯಕ್’ನನ್ನು ಒಮ್ಮೆಯೂ ಭೇಟಿಯಾಗಲೇ ಇಲ್ಲ… ಸಂಜು ಜೊತೆಗೆ ಮಾಧುರಿ ಅಂತರ ಕಾಯ್ದುಕೊಂಡಿದ್ದರು.. ಜೊತೆಗೆ, ನಮ್ಮಿಬ್ಬರ ಪ್ರೇಮದ ಸುದ್ದಿ ಬರೀ ವದಂತಿ. ಇವೆಲ್ಲಾ ಬರೀ ಗಾಸಿಪ್‍ಗಳು ಎಂದು ಹೇಳಿದ್ದರು. ಇದು ಸಂಜಯ್ ಮನಸ್ಸಿಗೆ ಘಾಸಿಯುಂಟು ಮಾಡಿತ್ತು. ಅವರು ಕೂಡಾ ಈ ಲವ್ ಸ್ಟೋರಿಯನ್ನು ಅಲ್ಲಗಳೆಯೋದಕ್ಕೆ ಆರಂಭಿಸಿದ್ದರು. ಅಲ್ಲಿಗೆ ಸುಂದರ ಪ್ರೀತಿಯೊಂದು ಹಳ್ಳ ಹಿಡಿದಿತ್ತು…! ಇದಾಗಿ ಈಗ ಸುಮಾರು 20 ವರ್ಷ…!

`ಕಳಂಕ್’ನಲ್ಲಿ ಒಂದಾಗುತ್ತಿದೆ ಜೋಡಿ…! : ಒಂದು ಕಾಲದಲ್ಲಿ ಸೂಪರ್ ಹಿಟ್ ಚಿತ್ರಗಳನ್ನೇ ನೀಡಿದ್ದ ಜೋಡಿ ನಂತರ ದೂರವಾಗಿತ್ತು. ಅದೂ ಒಂದೆರಡು ವರ್ಷ ಅಲ್ಲ. ಬರೋಬ್ಬರಿ 20 ವರ್ಷಕ್ಕೂ ಅಧಿಕ…! ಆದರೆ, ಇದೀಗ ಈ ಜೋಡಿ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಇದನ್ನು ಸಾಧ್ಯವಾಗಿಸಿದ್ದು ಕರಣ್ ಜೋಹಾರ್. ತಮ್ಮ `ಕಳಂಕ್’ ಚಿತ್ರದಲ್ಲಿ ಇವರಿಬ್ಬರನ್ನು ನಟಿಸುವಂತೆ ಮಾಡುವಲ್ಲಿ ಕರಣ್ ಸಕ್ಸಸ್ ಆಗಿದ್ದಾರೆ. ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ, ವರುಣ್ ಧವನ್, ಆದಿತ್ಯಾ ರಾಯ್ ಕಪೂರ್, ಆಲಿಯಾ ಭಟ್ ಸೇರಿದಂತೆ ಹಲವರು ನಟಿಸಿದ್ದಾರೆ. ಶೂಟಿಂಗ್ ಕೂಡಾ ಶುರುವಾಗಿದೆ. ಇಂದಿನಿಂದ ಸಂಜಯ್ ದತ್ ಪಾರ್ಟ್‍ನ ಶೂಟಿಂಗ್ ಶುರುವಾಗಲಿದೆ… ಆದರೆ, ಇಂದು ಸಂಜೂ ಮಾಧುರಿ ಅವ್ರನ್ನ ಭೇಟಿಯಾಗ್ತಾರಾ ಎಂದು ಗೊತ್ತಿಲ್ಲ. ಯಾಕೆಂದರೆ, ಮೊದಲ ದಿನದ ಶೂಟಿಂಗ್‍ನಲ್ಲಿ ಸಂಜಯ್‍ಗೆ ಸೋನಾಕ್ಷಿ ಹಾಗೂ ವರುಣ್ ಜೊತೆಗಿನ ಸೀನ್‍ಗಳು ಮಾತ್ರ ಇರೋದು. ಮಾಧುರಿ ಜೊತೆಗಿನ ಸೀನ್ ಇಲ್ಲವಂತೆ. ಹೀಗಾಗಿ, ಶೂಟಿಂಗ್ ಸ್ಪಾಟ್‍ನಲ್ಲಿ ಇವರಿಬ್ಬರು ಮುಖಾಮುಖಿಯಾಗ್ತಾರಾ ಎಂಬುದೂ ಗೊತ್ತಿಲ್ಲ… ಈ ಬಗ್ಗೆ ಇನ್ನೂ ಕುತೂಹಲ ಇದೆ… ಆದರೆ, ಮುಂದಿನದ್ದು ಗೊತ್ತಿಲ್ಲ…

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!