Saturday , December 15 2018
ಕೇಳ್ರಪ್ಪೋ ಕೇಳಿ
Home / Film News / ಲವ್​ನಲ್ಲಿ ರಣಬೀರ್- ಆಲಿಯಾ… : ಮದುವೆ ಬಗ್ಗೆ ಮಾತನಾಡಿದ್ದಾರೆ ಕಪೂರ್…!

ಲವ್​ನಲ್ಲಿ ರಣಬೀರ್- ಆಲಿಯಾ… : ಮದುವೆ ಬಗ್ಗೆ ಮಾತನಾಡಿದ್ದಾರೆ ಕಪೂರ್…!

ಮುಂಬೈ : ಬಾಲಿವುಡ್​ನಲ್ಲಿ ಈಗ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಹೆಸರು ಭರ್ಜರಿಯಾಗಿ ಗಾಸಿಪ್ ಕಾಲಂಗಳಲ್ಲಿ ಹರಿದಾಡುತ್ತಿದೆ. ಇಬ್ಬರೂ ಪರಸ್ಪರ ಡೇಟಿಂಗ್ ಮಾಡ್ತಿದ್ದಾರೆ ಅಂತಾನೇ ಬಿ ಟೌನ್​ನಲ್ಲಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ‘ಬ್ರಹ್ಮಾಸ್ತ್ರ’ ಚಿತ್ರದ ಶೂಟಿಂಗ್ ವೇಳೆ ಪರಸ್ಪರ ಪ್ರೀತಿಸೋದಕ್ಕೆ ಶುರು ಮಾಡಿರೋ ಜೋಡಿಯ ಹೆಸರೇ ಈಗ ಎಲ್ಲಾ ಭರ್ಜರಿಯಾಗಿ ಕೇಳಿ ಬರುತ್ತಿದೆ. ಈ ನಡುವೆ, ಸಂಜೂ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿಯಾಗಿದ್ದ ರಣಬೀರ್ ಸಾಮಾಜಿಕ ಜಾಲತಾಣದಲ್ಲೂ ಪ್ರಚಾರ ಆರಂಭಿಸಿದ್ದರು. ಸಾಮಾನ್ಯವಾಗಿ ರಣಬೀರ್ ಸಾಮಾಜಿಕ ಜಾಲತಾಣದಲ್ಲಿ ಸಿಗೋದು ಅಪರೂಪ. ಹೀಗಾಗಿ, ಸಿಕ್ಕಿದ್ದೇ ಛಾನ್ಸು ಅಂತ ಅಭಿಮಾನಿಗಳು ರಣಬೀರ್ ಬಳಿ ‘ಮದುವೆ ಯಾವಾಗ…?’ ಅಂತ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ರಣಬೀರ್ ಕೂಡಾ ‘ಆದಷ್ಟು ಬೇಗ’ ಎಂಬ ಉತ್ತರ ಕೊಟ್ಟಿದ್ದಾರೆ.


ಇನ್ನೊಂದ್ಕಡೆ, ಆಲಿಯಾ ಕೂಡಾ ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡುತ್ತಾ 30ನೇ ವರ್ಷಕ್ಕೆ ಮದುವೆಯಾಗ್ತೀನಿ ಅಂತ ಹೇಳಿದ್ದಾರೆ. ಅಲ್ಲದೆ, ನನಗೆ ಲಿವ್ ಇನ್ ರಿಲೇಷನ್​ನಲ್ಲಿ ನನಗೆ ನಂಬಿಕೆ ಇಲ್ಲ. ಹೀಗಾಗಿ, ಮದುವೆಯಾಗಿ ಬದುಕು ರೂಪಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!