Saturday , February 16 2019
ಕೇಳ್ರಪ್ಪೋ ಕೇಳಿ
Home / Film News / ಅನುಷ್ಕಾ ಬೈದಿದ್ದ ಯುವಕ ಕೂಡಾ ನಟ…! : ಸಿನೆಮಾದಿಂದ ಸಿಗದ `ಹೆಸರು’ ಈ ವೀಡಿಯೋದಿಂದ ಸಿಕ್ತು…!

ಅನುಷ್ಕಾ ಬೈದಿದ್ದ ಯುವಕ ಕೂಡಾ ನಟ…! : ಸಿನೆಮಾದಿಂದ ಸಿಗದ `ಹೆಸರು’ ಈ ವೀಡಿಯೋದಿಂದ ಸಿಕ್ತು…!

ಮುಂಬೈ : ಮೊನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೌಂಡ್ ಮಾಡುತ್ತಿದ್ದಾರೆ. ಐಷಾರಾಮಿ ಕಾರಿನಲ್ಲಿ ಬಂದ ಯುವಕನೊಬ್ಬ ರಸ್ತೆಯಲ್ಲಿ ಕಸ ಎಸೆದಿದ್ದನ್ನು ಕಂಡಿದ್ದ ಅನುಷ್ಕಾ ಅಲ್ಲಿಯೇ ಆತನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈ ವೀಡಿಯೋವನ್ನು ಅನುಷ್ಕಾ ಪತಿ ವಿರಾಟ್ ಸಾಮಾಜಿಕ ಜಾಲತಾಣಕ್ಕೆ ಅಪ್‍ಲೋಡ್ ಮಾಡಿದ್ದರು. ಕ್ಷಣಾರ್ಧದಲ್ಲಿ ಈ ವೀಡಿಯೋ ವೈರಲ್ ಆಗಿತ್ತು.

ಇದಾದ ಬಳಿಕ ಆ ಯುವಕ ಯಾರು ಎಂಬುದೂ ಗೊತ್ತಾಯ್ತು. ಈತನ ಹೆಸ್ರು ಅರ್ಹಾನ್. ಸಾಮಾಜಿಕ ಜಾಲತಾಣದಲ್ಲೇ ಪ್ರತ್ಯಕ್ಷವಾಗಿದ್ದ ಅರ್ಹಾನ್ ತನಗೆ ಬೈದಿದ್ದ ವಿರಾಟ್ ದಂಪತಿಯನ್ನು ಟೀಕಿಸಿದ್ದ. ನಾನು ಕ್ಷಮೆ ಕೇಳುತ್ತಿದ್ದರೂ ಅನುಷ್ಕಾ ಅವರ ಬಾಯಿಯಲ್ಲಿ ಬಂದ ಮಾತುಗಳು ಕಸಕ್ಕಿಂತ ಕಡೆಯಾಗಿ ಇದ್ದವರು ಎಂಬ ಅರ್ಥದಲ್ಲಿ ಈತ ಮೆಸೇಜ್ ಪೋಸ್ಟ್ ಮಾಡಿದ್ದ. ಹೀಗೆ ಶುರುವಾಗಿದ್ದ ಜಗಳದಲ್ಲಿ ಅರ್ಹಾನ್ ಕೂಡಾ ಫೇಮಸ್ ಆದ… ಆಗಲೇ ಶುರುವಾಗಿದ್ದು ಈತ ಯಾರು ಎಂಬ ಪ್ರಶ್ನೆ… ಅದಕ್ಕೆ ಈಗ ಉತ್ತರ ಸಿಕ್ಕಿದೆ…

Disclaimer: i have no desire to gain any mileage from this post of mine… Horrible! So I happened to carelessly Litter a sq mm of plastic while driving ! A car passing by rolls their window down and there we have our wonderful @anushkasharma ranting and yelling like a crazy roadside person! While I’m apologetic for my carelessness , Mrs Anushka Sharma Kohli a little etiquette and politeness in ur dialogue wouldn’t have made u a lesser star !! There are all kinds of manners and hygiene .. verbal etiquette is one of them ! The garbage that mistakenly went out of the window of my "luxury car"… Was way less then the garbage that came out from your mouth… From ur "luxury car's" window… Or the trashy mind @virat.kohli to shoot and post this online… For whatever gains… Now thats some serious trash!!!

A post shared by Arhhan Singh (@arhhansingh) on


ಅರ್ಹಾನ್ ಕೂಡಾ ಒಬ್ಬ ನಟ…! : ಅಸಲಿಗೆ ಈ ಅರ್ಹಾನ್ ಕೂಡಾ ಈ ಹಿಂದೆ ಬಾಲನಟನಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ. ಶಾರೂಖ್ ಖಾನ್ ಅವರೊಂದಿಗೂ ತೆರೆ ಹಂಚಿಕೊಂಡಿದ್ದ. 1996 ರಲ್ಲಿ `ಇಂಗ್ಲೀಷ್ ಬಾಬು ದೇಸಿ ಮೆಮ್’ ಚಿತ್ರದಲ್ಲಿ ಶಾರೂಖ್ ಜೊತೆ ಈತ ನಟಿಸಿದ್ದ. ಇನ್ನು, `ರಾಜಾ’ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಜೊತೆಗೂ ಅರ್ಹಾನ್ ಆ್ಯಕ್ಟ್ ಮಾಡಿದ್ದ ಎಂದು ಗೊತ್ತಾಗಿದೆ. ಇದಲ್ಲದೆ, `ಪಾಠಶಾಲಾ’ ಚಿತ್ರದಲ್ಲಿ ಶಾಹಿದ್ ಕಪೂರ್ ಜೊತೆಗೆ ಒಬ್ಬ ವಿದ್ಯಾರ್ಥಿಯಾಗಿಯೂ ಈತ ಕಾಣಿಸಿಕೊಂಡಿದ್ದ.


ಅದೂ ಅಲ್ಲದೆ, ಇನ್ನೂ ಕೆಲ ಚಿತ್ರಗಳಲ್ಲಿ ನಟಿಸಿದ್ದ ಈತನಿಗೆ ಸಿನೆಮಾದಿಂದ `ಹೆಸರು’ ಬರಲೇ ಇಲ್ಲ… ಆದರೆ, ಯಾವಾಗ ಅನುಷ್ಕಾ ಬೈದರೋ ಈ ಅರ್ಹಾನ್ ನೆಗೆಟಿವ್ ಕಾರಣಕ್ಕಾದರೂ ಸುದ್ದಿಯಾಗಿ ಫೇಮಸ್ ಆಗಿದ್ದಾನೆ. ಸದ್ಯ ಇವರಿಗೆ ಬಂದ `ಹೆಸರು’ ಒಳ್ಳೆಯ ಕೆಲಸದಿಂದ ಬಂದಿದ್ದು ಅಲ್ಲ. ಜೊತೆಗೆ, ಇವನ ಕೆಲಸ ಅನುಕರಣೀಯವೂ ಅಲ್ಲ. ಆದರೂ ಈತ ಜನರಿಗೆ ಈಗ ಪರಿಚಿತನಾಗಿದ್ದಾನೆ ಎಂಬುದಂತೂ ಸತ್ಯ…!

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!