Monday , September 24 2018
ಕೇಳ್ರಪ್ಪೋ ಕೇಳಿ
Home / Film News / ಜೂಹಿ ಚಾವ್ಲಾ ಈಗ ಕನ್ನಡ ಶಿಕ್ಷಕಿ, ಕನ್ನಡ ಗಾಯಕಿ…!

ಜೂಹಿ ಚಾವ್ಲಾ ಈಗ ಕನ್ನಡ ಶಿಕ್ಷಕಿ, ಕನ್ನಡ ಗಾಯಕಿ…!

ಬೆಂಗಳೂರು : ಬಾಲಿವುಡ್ ನಟಿ ಜೂಹಿ ಚಾವ್ಲಾ ಮತ್ತೊಮ್ಮೆ ಕನ್ನಡಕ್ಕೆ ಬಂದಿದ್ದಾರೆ. ಈ ಹಿಂದೆ ರವಿಚಂದ್ರನ್ ಅಭಿನಯದ ಪ್ರೇಮಲೋಕ, ಶಾಂತಿಕ್ರಾಂತಿ ಮತ್ತು ಕಿಂದರಿಜೋಗಿ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದ ಜೂಹಿ ಇತ್ತೀಚೆಗೆ ರಮೇಶ್ ಅರವಿಂದ್ ಅವರ 100ನೇ ಚಿತ್ರ ಪುಷ್ಪಕ ವಿಮಾನದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಇದೇ ಜೂಹಿ ಮತ್ತೆ ಸ್ಯಾಂಡಲ್‍ವುಡ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ, ಸ್ವಲ್ಪ ಡಿಫ್ರೆಂಟ್ ಆದ ರೋಲ್ ಅನ್ನೇ ಜೂಹಿ ಇಲ್ಲಿ ನಿಭಾಯಿಸುತ್ತಿದ್ದಾರೆ.

ಈ ಬಾರಿ ಜೂಹಿ ಅಭಿನಯಿಸುತ್ತಿರುವ ಚಿತ್ರ `ವೆರಿಗುಡ್ 10/10′. ಈ ಚಿತ್ರದಲ್ಲಿ ಇವರದ್ದು ಕನ್ನಡ ಶಿಕ್ಷಕಿಯ ಪಾತ್ರ. ಅದೂ ಅಲ್ಲದೆ, ಇದೇ ಚಿತ್ರದಲ್ಲಿ ಹಾಡನ್ನೂ ಜೂಹಿ ಹಾಡಿದ್ದಾರೆ.. ಹೀಗಾಗಿ, ಈ ಚಿತ್ರ ಜೂಹಿಗೆ ಗಾಯಕಿಯಾಗಿ ಮೊದಲ ಚಿತ್ರ… ಮೊದಲು ಈ ಹಾಡನ್ನು ರಾಜು ಅನಂತಸ್ವಾಮಿ ಅವರು ಹಾಡಿದ್ದು, ಇದೇ ಹಾಡನ್ನು ಚಿತ್ರಕ್ಕೂ ಬಳಸಿಕೊಳ್ಳಲಾಗಿದೆ. ಆದರೆ, ಚಿತ್ರದಲ್ಲಿ ಈ ಹಾಡಿಗೆ ಜೂಹಿ ಧ್ವನಿ ನೀಡಿದ್ದು, ವಿ.ಮನೋಹರ್ ಸಂಗೀತ ನೀಡಿದ್ದಾರೆ. ನಟ, ಬರಹಗಾರ ಯಶವಂತ ದೇಶಪಾಂಡೆ ಈ ಚಿತ್ರದ ಡೈರೆಕ್ಟರ್.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!