Tuesday , November 13 2018
ಕೇಳ್ರಪ್ಪೋ ಕೇಳಿ
Home / Film News / ಸಂಜೂ ಟೀಕೆ : ಸಲ್ಮಾನ್ ಮಾತಿಗೆ ರಣಬೀರ್ ತಿರುಗೇಟು…!

ಸಂಜೂ ಟೀಕೆ : ಸಲ್ಮಾನ್ ಮಾತಿಗೆ ರಣಬೀರ್ ತಿರುಗೇಟು…!

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನವನ್ನೇ ತೆರೆಗೆ ತರುವ ‘ಸಂಜೂ’ ಚಿತ್ರ ಈಗ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ರಾಜ್​ಕುಮಾರ್ ಇರಾನಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಸಂಜಯ್ ದತ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಎಲ್ಲರೂ ರಣಬೀರ್ ನಟನೆಗೆ ಈಗಾಗಲೇ ಫಿದಾ ಆಗಿದ್ದಾರೆ.

ಆದ್ರೆ, ಬಾಲಿವುಡ್​ನ ಸ್ಟಾರ್ ಹಾಗೂ ದತ್ ಸ್ನೇಹಿತ ಸಲ್ಮಾನ್ ಖಾನ್ ಮಾತ್ರ ಈ ಬಗ್ಗೆ ಡಿಫ್ರೆಂಟ್ ಆದ ಅಭಿಪ್ರಾಯವನ್ನೇ ಹೊಂದಿದ್ದಾರೆ. ‘ಈ ಚಿತ್ರದಲ್ಲಿ ಸಂಜಯ್ ದತ್ ಪಾತ್ರವನ್ನು ಸ್ವತಃ ಸಂಜಯ್ ಅವರೇ ಮಾಡಬೇಕಾಗಿತ್ತು. ಹಾಗೆ ಆದಾದ ಈ ಪಾತ್ರಕ್ಕೆ ಇನ್ನಷ್ಟು ನ್ಯಾಯ ಸಿಗುತ್ತಿತ್ತು’ ಎಂಬುದು ಸಲ್ಮಾನ್ ಅಭಿಪ್ರಾಯ.

ಇತ್ತ, ಸಲ್ಮಾನ್ ಅಭಿಪ್ರಾಯಕ್ಕೆ ರಣಬೀರ್ ನಯವಾಗಿಯೇ ತಿರುಗೇಟು ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ರಣಬೀರ್, ‘ತನ್ನ ಜೀವನ ಕತೆಗೆ ತಾನೇ ಅಭಿನಯಿಸಿದ್ದು ಇಷ್ಟರ ವರೆಗೆ ನಡೆದಿಲ್ಲ. ಇದು ಪಾತ್ರದ ಆಶಯಕ್ಕೂ ಧಕ್ಕೆ ತರುತ್ತದೆ. ನಾನು ದತ್ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದೇನೆ’ ಎಂದು ರಣಬೀರ್ ಹೇಳಿದ್ದಾರೆ. ಈ ಚಿತ್ರದಲ್ಲಿ ಪರೇಶ್ ರಾವಲ್, ಮನಿಶಾ ಕೊಯಿರಾಲ, ಸೋನಂ ಕಪೂರ್, ಅನುಷ್ಕಾ ಶರ್ಮಾ ಸೇರಿದಂತೆ ಹಲವರು ನಟಿಸಿದ್ದಾರೆ. ಜೂನ್ 29ಕ್ಕೆ ಈ ಚಿತ್ರ ತೆರೆಕಾಣುತ್ತಿದೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!