Saturday , February 16 2019
ಕೇಳ್ರಪ್ಪೋ ಕೇಳಿ
Home / Film News / ಚಿಕಾಗೋದಲ್ಲಿ ಟಾಲಿವುಡ್ ನಟಿಯರ ವೇಶ್ಯಾವಾಟಿಕೆ… : ಈ ದಂಧೆ ನಡೆಯುತ್ತಿದ್ದದ್ದು ಹೇಗೆ ಗೊತ್ತಾ…?

ಚಿಕಾಗೋದಲ್ಲಿ ಟಾಲಿವುಡ್ ನಟಿಯರ ವೇಶ್ಯಾವಾಟಿಕೆ… : ಈ ದಂಧೆ ನಡೆಯುತ್ತಿದ್ದದ್ದು ಹೇಗೆ ಗೊತ್ತಾ…?

ಹೈದರಾಬಾದ್ : ಟಾಲಿವುಡ್ ಈಗ ಬೇಡದ ಕಾರಣಕ್ಕೇ ಸುದ್ದಿಯಾಗ್ತಿದೆ. ನಟಿ ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ ಬೆನ್ನಲ್ಲೇ ತೆಲುಗು ಫಿಲಂ ಇಂಡಸ್ಟ್ರಿಯ ಪ್ರಮುಖ ನಿರ್ಮಾಪಕ ಕೃಷ್ಣನ್ ಮುದುಗುಮುಡಿ ಮತ್ತು ಆತನ ಪತ್ನಿ ಚಂದ್ರಕಲಾ ಪೂರ್ಣಿಮಾ ಮುದುಗುಮುಡಿ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆಯ ವಿಷಯ ಸಂಚಲನ ಮೂಡಿಸಿದೆ. ಈ ದಂಪತಿ ಅಮೇರಿಕಾದ ಚಿಕಾಗೋದಲ್ಲಿ ಈ ವೇಶ್ಯಾವಾಟಿಕಾ ವ್ಯವಹಾರ ನಡೆಸುತ್ತಿದ್ದು, ಬಂಧನಕ್ಕೊಳಗಾಗಿದ್ದಾರೆ. ಇವರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ 42 ಪುಟಗಳ ಚಾರ್ಜ್‍ಶೀಟ್ ಕೂಡಾ ಸಲ್ಲಿಕೆಯಾಗಿದೆ. ನಟಿಯರನ್ನು ಬಳಸಿಕೊಂಡು ಇವರಿಬ್ಬರು ಇಲ್ಲಿ ಹೈಫೈ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.

ಈ ದಂಧೆ ನಡೆಯುತ್ತಿದ್ದದ್ದು ಹೇಗೆ..? : ಈ ದಂಪತಿ ಆರು ಭಾರತೀಯ ನಟಿಯರನ್ನು ಅಮೇರಿಕಾಕ್ಕೆ ಕರೆದುಕೊಂಡು ಹೋಗಿ ಈ ದಂಧೆ ನಡೆಸಿದ್ದರಂತೆ. ಆರಂಭದಲ್ಲಿ ಅಮೇರಿಕಾದಲ್ಲಿ ನಡೆಯುತ್ತಿದ್ದ ತೆಲುಗು ಕಾನ್ಫರೆನ್ಸ್ ಅಥವಾ ಭಾರತಕ್ಕೆ ಸಂಬಂಧಿಸಿದ ಕಲೆ, ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಈ ನಟಿಯರನ್ನು ಇವರು ಕರೆದುಕೊಂಡು ಹೋಗುತ್ತಿದ್ದರು. ಈ ಮೂಲಕ ಇವರು `ಕಸ್ಟಮರ್ಸ್’ ಅನ್ನು ಸೆಳೆಯುತ್ತಿದ್ದರು. ಕಾಮಾಸಕ್ತರನ್ನು ಸೆಳೆಯುವ ಸಲುವಾಗಿಯೇ ಇಂತಹ ಕಾರ್ಯಕ್ರಮಗಳಿಗೆ ಈ ದಂಪತಿ ನಟಿಯರನ್ನು ಕರೆದುಕೊಂಡು ಹೋಗುತ್ತಿದ್ದರು ಎಂದು ಗೊತ್ತಾಗಿದೆ.

ಇದರಲ್ಲಿ ಮೊದಲ ನಟಿ 2017ರ ನವೆಂಬರ್ 20 ರಂದು ದೆಹಲಿಯಿಂದ ಚಿಕಾಗೋದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ನವೆಂಬರ್ 18 ರಂದು `ತೆಲುಗು ಅಸೋಷಿಯೇಷನ್ ಆಫ್ ಸೌತ್ ಕ್ಯಾಲಿಫೋರ್ನಿಯಾ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ 2017ರ ನವೆಂಬರ್ 6 ರಂದು ದೆಹಲಿಯಲ್ಲಿ ಇವರಿಗೆ ವೀಸಾ ಲಭಿಸಿತ್ತು. ಆದರೆ, ಈ ಕಾರ್ಯಕ್ರಮದ ಮುಗಿದು ಎರಡು ದಿನ ಆದ ಮೇಲೆ ಈ ನಟಿ ಪ್ರಯಾಣ ಬೆಳೆಸಿದ್ದರು. ಜೊತೆಗೆ, ಕ್ಯಾಲಿಫೋರ್ನಿಯಾ ಬದಲು ಇವರು ಬಂದದ್ದು ಚಿಕಾಗೋಗೆ..! ಹೀಗಾಗಿಯೇ, ಅಧಿಕಾರಿಗಳಿಗೆ ಅನುಮಾನ ಬಂದು ಈಕೆಯ ವಿಚಾರಣೆ ಆರಂಭಿಸಿದ್ದರು. ಆದರೆ, ಆರಂಭದಲ್ಲಿ ವಿಚಾರಣೆ ವೇಳೆ ಈ ನಟಿ ತಾನು ಉತ್ತರ ಅಮೇರಿಕಾ ತೆಲುಗು ಸೊಸೈಟಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಂದಿದ್ದಾಗಿ ಹೇಳಿದ್ದರು. ಈ ಬಗ್ಗೆ ತನಿಖಾಧಿಕಾರಿಗಳು ಇನ್ನೂ ವಿಸ್ತøತವಾಗಿಯೇ ತನಿಖೆ ನಡೆಸಿದಾಗ ಈ ನಟಿಯ ಹೇಳಿಕೆಯೇ ಸುಳ್ಳು ಎಂದು ಗೊತ್ತಾಗಿತ್ತು. ಜೊತೆಗೆ, ಉತ್ತರ ಅಮೇರಿಕಾ ತೆಲುಗು ಸೊಸೈಟಿ ಅಧ್ಯಕ್ಷ ಕೂಡಾ ನಾವು ಈ ನಟಿಯನ್ನು ದೇಶಕ್ಕೆ ಆಹ್ವಾನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲಿಗೆ ಈಕೆಯ ನಾಟಕ ಬಯಲಾದಂತಾಗಿದೆ. ಬಳಿಕ ನಡೆದ ವಿಚಾರಣೆಯಲ್ಲಿ ಈಕೆಯನ್ನು ಅಮೇರಿಕಾಕ್ಕೆ ಕರೆತಂದದ್ದು ಮತ್ತು ಎಲ್ಲಾ ವ್ಯವಸ್ಥೆ ಮಾಡಿದ್ದು `ರಾಜು’ ಎಂಬ ವ್ಯಕ್ತಿ ಎಂದು ಗೊತ್ತಾಗಿತ್ತು. ಈ ರಾಜು ಬೇರೆ ಯಾರೂ ಅಲ್ಲ. ಸದ್ಯ ಬಂಧನಕ್ಕೊಳಗಾಗಿರುವ ಅದೇ ನಿರ್ಮಾಪಕ ಕೃಷ್ಣನ್…! ಈಗ ಈ ನಟಿಯ ವೀಸಾವನ್ನು ರದ್ದು ಮಾಡಲಾಗಿದೆ…

ಇನ್ನು, ಇದೇ ಪ್ರಕರಣದಲ್ಲಿ ಇರುವ ಇನ್ನೊಬ್ಬ ನಟಿ ನೆವಾರ್ಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಂಬೈಯಿಂದ 2017ರ ಡಿಸೆಂಬರ್ 26ರಂದು ಬಂದಿದ್ದರು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಮೂರು ತಿಂಗಳು ಇವರು ಅಮೇರಿಕಾದಲ್ಲೇ ಇರಲಿದ್ದಾರೆ ಎಂಬುದು ವೀಸಾದಲ್ಲಿ ಉಲ್ಲೇಖವಾಗಿತ್ತು. ಈ ನಟಿಯ ಪ್ರವಾಸದ ಹಿನ್ನೆಲೆಯನ್ನು ನೋಡಿದಾಗ ಈ ನಟಿಯೂ 2017ರ ಅಕ್ಟೋಬರ್ 6 ರಂದು ಚಿಕಾಗೋಗೆ ಭೇಟಿ ನೀಡಿದ್ದರು. ಅಲ್ಲದೆ, ನವೆಂಬರ್ 13ರ ತನಕ ಇವರು ಇಲ್ಲೇ ವಾಸವಾಗಿದ್ದರು. ಈಕೆ ಕೂಡಾ ಹೇಳಿದ್ದು `ರಾಜು’ ಹೆಸರನ್ನೇ…! ಅದೂ ಅಲ್ಲದೆ, ಹೊಸ ವರ್ಷದ ಕಾರ್ಯಕ್ರಮದಲ್ಲಿ ಬಾಲಿವುಡ್ ಡ್ಯಾನ್ಸ್ ಪ್ರದರ್ಶನಕ್ಕಾಗಿ ತಾನು ಅಮೇರಿಕಾದ ವಿವಿಧ ಪ್ರದೇಶಗಳಿಗೆ ಹೋಗಿದ್ದಾಗಿಯೂ ಇವರು ತಿಳಿಸಿದ್ದಾರೆ. ಈಕೆಯ ಈ ಹಿಂದಿನ ಪ್ರವಾಸದಲ್ಲಿ ಅಂದರೆ ಅಕ್ಟೋಬರ್‍ನಲ್ಲಿ `ರಾಜು’ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲೂ ಈಕೆ ಪಾಲ್ಗೊಂಡಿದ್ದರು. ಈ ಪ್ರವಾಸದ ಅವಧಿಯಲ್ಲಿ ಈಕೆ ನಾಲ್ಕು ನಗರಗಳಿಗೆ ಭೇಟಿ ನೀಡಿದ್ದು, ಇದರಲ್ಲಿ ಮೂರು ನಗರಗಳಲ್ಲಿ `ಕ್ಲೈಂಟ್’ಗಳು ಈಕೆ ಇದ್ದ ರೂಮ್‍ಗೇ ಹೋಗಿದ್ದರೆ, ಇನ್ನೊಂದು ಏರಿಯಾದಲ್ಲಿ ಮಾತ್ರ ಆರೋಪಿ `ವೇಬಾ’ ಈಕೆಯೊಂದಿಗೇ ಪ್ರಯಾಣ ಬೆಳೆಸಿದ್ದಾಗಿಯೂ ಗೊತ್ತಾಗಿದೆ. ಈಕೆಯ ವೀಸಾವನ್ನೂ ಸದ್ಯಕ್ಕೆ ರದ್ದು ಮಾಡಲಾಗಿದೆ..

ಹೀಗೆ ಸುಮಾರು ಆರು ನಟಿಯರನ್ನು ಕಾರ್ಯಕ್ರಮದ ಹೆಸರಿನಲ್ಲಿ ಕರೆಸಿಕೊಂಡು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗಿದೆ ಎಂದು ಗೊತ್ತಾಗಿದ್ದು, ಇವರೆಲ್ಲರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!