Saturday , February 16 2019
ಕೇಳ್ರಪ್ಪೋ ಕೇಳಿ
Home / Sudina Special / ಜೆಸಿಬಿಯಲ್ಲಿ ವಧುವರರ ಮೆರವಣಿಗೆ : ವೈರಲ್ ಆಯ್ತು ವೀಡಿಯೋ

ಜೆಸಿಬಿಯಲ್ಲಿ ವಧುವರರ ಮೆರವಣಿಗೆ : ವೈರಲ್ ಆಯ್ತು ವೀಡಿಯೋ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಮದುವೆ ವೀಡಿಯೋವೊಂದು ಈಗ ವೈರಲ್ ಆಗಿದೆ. ಸಾಮಾನ್ಯವಾಗಿ ಮದುಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗ್ತಾರೆ. ಆದ್ರೆ, ಇಲ್ಲಿ ಒಬ್ಬರು ಡಿಫ್ರೆಂಟ್ ಆಗಿಯೇ ಮದುವೆಯ ಮೆರವಣಿಗೆ ಮಾಡಿಕೊಂಡಿದ್ದಾರೆ. ಅದೂ ಜೆಸಿಬಿ ಮೂಲಕ…! ಅಸಲಿಗೆ ವರ ಚೇತನ್ ಜೆಸಿಬಿ ಆಪರೇಟರ್. ಹೀಗಾಗಿ, ತನ್ನ ಕಾಯಕದ ಬಗೆಗಿನ ಹೆಮ್ಮೆಯಿಂದಲೇ ಚೇತನ್ ಹೀಗೆ ತನಗೆ ಅನ್ನ ಕೊಡುವ ಜೆಸಿಬಿಯಲ್ಲೇ ಮೆರವಣಿಗೆ ಮಾಡಿಕೊಂಡಿದ್ದಾರೆ. ಇದಕ್ಕೆ ಇವರ ಮಡದಿ ಮಮತಾ ಕೂಡಾ ಸಾಥ್ ಕೊಟ್ಟಿದ್ದರು. ಪರ್ಪುಂಜದ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಬಳಿಕ ವಧು ವರರ ಈ ಸಂಭ್ರಮದ ಮೆರವಣಿಗೆ ನಡೆದಿದೆ. ಈ ವೀಡಿಯೋ ಈಗ ಸಖತ್ ವೈರಲ್ ಆಗಿದೆ.

About sudina

Check Also

ರಜನಿಕಾಂತ್ ಚಿತ್ರ ನೋಡಿ ಆಸ್ಪತ್ರೆಯಲ್ಲಿ ನೋವು ಮರೆಯುತ್ತಿರುವ ಬೆಂಗಳೂರಿನ ಬಾಲಕ…!

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಅವರ ಸಿನೆಮಾಗಳನ್ನು ಕಂಡು ಪ್ರೀತಿಸುವ ಜನರೆಷ್ಟೋ… ಇದೀಗ, …

Leave a Reply

Your email address will not be published. Required fields are marked *

error: Content is protected !!