Saturday , February 16 2019
ಕೇಳ್ರಪ್ಪೋ ಕೇಳಿ
Home / Sudina Special / ಹಳ್ಳಿಗಟ್ಟು ಚಮ್ಮಟೀರ ಕುಟುಂಬಸ್ಥರ ವೈಭವದ ಪಾಷಣ ಮೂರ್ತಿ ಕೋಲ

ಹಳ್ಳಿಗಟ್ಟು ಚಮ್ಮಟೀರ ಕುಟುಂಬಸ್ಥರ ವೈಭವದ ಪಾಷಣ ಮೂರ್ತಿ ಕೋಲ

ಮಡಿಕೇರಿ : ಹಳ್ಳಿಗಟ್ಟು ಚಮ್ಮಟೀರ ಕುಟುಂಬಸ್ಥರ ಬಲ್ಯ ಮನೆಯಲ್ಲಿ 5 ವರ್ಷಗಳಿಗೊಮ್ಮೆ ನಡೆಯುವ ಪಾಷಣ ಮೂರ್ತಿ ಕೋಲ ಮೊನ್ನೆ ವೈಭವದಿಂದ ನಡೆಯಿತು. ನೂರಾರು ವರ್ಷಗಳ ಇತಿಹಾಸ ಇರುವ ಈ ಕೋಲಕ್ಕೆ ಚಮ್ಮಟೀರ ಕುಟುಂಬಸ್ಥರು, ತವರುಮನೆ ಹೆಣ್ಣುಮಕ್ಕಳು, ನೆಂಟರು, ಊರಿನವರು ಸಾಕ್ಷಿಯಾದರು. ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಈ ಕೋಲವನ್ನು ಹಳ್ಳಿಗಟ್ಟು ಮೂಲದ ಚಮ್ಮಟೀರ ಕುಟುಂಬಸ್ಥರು ಒಟ್ಟು ಸೇರಿ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿದ್ದಾರೆ.

ಧರ್ಮ ದೇವತೆ, ಪಂಜುರ್ಲಿ, ಪಾಷಣಮೂರ್ತಿ, ಗುಳಿಗ ಸೇರಿದಂತೆ ವಿವಿಧ ದೈವಗಳಿಗೆ ಇಲ್ಲಿ ಕೋಲ ನಡೆಯಿತು. ತಲೆತಲೆಮಾರುಗಳಿಂದ ಇಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಈ ಕೋಲವನ್ನು ಶೃದ್ಧಾಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತದೆ. ರಾತ್ರಿ ಪೂರ್ತಿ ನಡೆದ ಈ ನೇಮೋತ್ಸವದಲ್ಲಿ ಅನೇಕ ಭಕ್ತರು ತಮ್ಮ ಕಷ್ಟ ಕಾರ್ಪಣ್ಯದ ಬಗ್ಗೆ ದೈವದಿಂದ ಪರಿಹಾರವನ್ನು ಕಂಡುಕೊಂಡರು. ಕೋಲದ ಕೊನೆಯಲ್ಲಿ ಗುಳಿಗ ಅವಾಹನೆಯ ವ್ಯಕ್ತಿ ಮರದ ಮೇಲಿದ್ದ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕೋಲಕ್ಕೆ ತೆರೆ ಎಳೆಯಲಾಯಿತು.

About sudina

Check Also

ರಜನಿಕಾಂತ್ ಚಿತ್ರ ನೋಡಿ ಆಸ್ಪತ್ರೆಯಲ್ಲಿ ನೋವು ಮರೆಯುತ್ತಿರುವ ಬೆಂಗಳೂರಿನ ಬಾಲಕ…!

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಅವರ ಸಿನೆಮಾಗಳನ್ನು ಕಂಡು ಪ್ರೀತಿಸುವ ಜನರೆಷ್ಟೋ… ಇದೀಗ, …

Leave a Reply

Your email address will not be published. Required fields are marked *

error: Content is protected !!