Saturday , September 22 2018
ಕೇಳ್ರಪ್ಪೋ ಕೇಳಿ
Home / Interval / ಸಲ್ಮಾನ್​ಗೆ ಫಸ್ಟ್ ಫಿಲಂನಲ್ಲಿ ಛಾನ್ಸ್ ಸಿಕ್ಕಿದ್ದು ಪರ್ಸನಾಲಿಟಿಯಿಂದಲ್ಲ…! : ಮತ್ತೇಗೇ ಅನ್ನೋದೇ ಇಂಟ್ರಸ್ಟಿಂಗ್…!

ಸಲ್ಮಾನ್​ಗೆ ಫಸ್ಟ್ ಫಿಲಂನಲ್ಲಿ ಛಾನ್ಸ್ ಸಿಕ್ಕಿದ್ದು ಪರ್ಸನಾಲಿಟಿಯಿಂದಲ್ಲ…! : ಮತ್ತೇಗೇ ಅನ್ನೋದೇ ಇಂಟ್ರಸ್ಟಿಂಗ್…!

ಬಾಲಿವುಡ್ ನಟ ಸಲ್ಮಾನ್ ಖಾನ್​ರದ್ದು ಮಸ್ತ್ ಮಸ್ತ್ ಪರ್ಸನಾಲಿಟಿ… ಶರ್ಟ್ ತೆಗೆದು ಮಸಲ್ಸ್ ಪ್ರದರ್ಶಿಸೋದ್ರಲ್ಲೂ ಸಲ್ಲೂಮಿಯಾ ಎತ್ತಿದ ಕೈ. ಇಂತಹ ಸಲ್ಲೂಗೆ ಫಸ್ಟ್​ ಫಿಲಂನಲ್ಲಿ ಛಾನ್ಸ್ ಸಿಕ್ಕಿದ್ದು ಅವರ ಹೆಸರು ಮತ್ತು ಈ ಪರ್ಸನಾಲಿಟಿಯಿಂದಲ್ಲ…!‘ಮೈನೇ ಪ್ಯಾರ್ ಕಿಯಾ’ನೇ ಸಲ್ಮಾನ್ ಮೊದಲ ಚಿತ್ರ ಅಂತ ಎಲ್ಲರ ಮನಸ್ಸಿನಲ್ಲೂ ರಿಜಿಸ್ಟರ್ ಆಗಿದೆ. ಆದರೆ,  ‘ಮೈನೇ ಪ್ಯಾರ್ ಕಿಯಾ’ ಚಿತ್ರಕ್ಕೂ ಮೊದಲೇ ಸಲ್ಮಾನ್ ‘ಬೀವಿ ತೋ ಐಸಿ’ ಎಂಬ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ರೇಖಾ, ಫಾರೂಖ್ ಶೇಖ್ ಮತ್ತು ಬಿಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸಲ್ಮಾನ್ ನಿಭಾಯಿಸಿದ್ದು ಫಾರೂಖ್ ಅವರ ಸಹೋದರನ ಪಾತ್ರವನ್ನು. ಸಣ್ಣ ಚಿಕ್ಕ ಪಾತ್ರವದು, ಅಷ್ಟು ದೊಡ್ಡ ಸ್ಕೋಪ್ ಕೂಡಾ ಈ ಪಾತ್ರಕ್ಕೆ ಇರಲಿಲ್ಲ. 1988ರಲ್ಲಿ ತೆರೆಕಂಡ ಈ ಚಿತ್ರವನ್ನು ಜೆ.ಕೆ.ಬಿಹಾರಿ ಬರೆದು ನಿರ್ದೇಶಿಸಿದ್ದರು. ಇಷ್ಟಕ್ಕೂ ಈ ಚಿತ್ರದಲ್ಲಿ ಸಲ್ಲೂಗೆ ಛಾನ್ಸ್ ಸಿಕ್ಕಿದ್ದು ಹೇಗೆ ಎಂಬ ಸತ್ಯ ಅವರಿಗೂ ಗೊತ್ತಾಗಿದ್ದು ಎರಡು ವರ್ಷಗಳ ಹಿಂದೆ. ಅದು ಜೆ.ಕೆ.ಬಿಹಾರಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ…

ನಿಜವಾಗಿ ಈ ಪಾತ್ರಕ್ಕೆ ಮೊದಲ ಆಯ್ಕೆ ಸಲ್ಮಾನ್ ಆಗಿರಲ್ಲ…! ನಿರ್ದೇಶಕ ಬಿಹಾರಿ ಅವರು ಸಾಕಷ್ಟು ಹೆಸರಾಂತ ನಟರನ್ನು ಈ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಯಾರೂ ಈ ಪಾತ್ರವನ್ನು ಒಪ್ಪಿಕೊಂಡಿರಲಿಲ್ಲ. ಇದರಿಂದ ನಿರ್ದೇಶಕರು ತುಂಬಾ ನೊಂದಿದ್ದರು. ಹೀಗಾಗಿ, ಅವರ ತಂಡದ ಬಳಿ ಬೇರೆ ಯಾರನ್ನಾದರೂ ಹುಡುಕಿ ಎಂದು ಹೇಳಿದ್ದರು. ಆಗ ಸಿಕ್ಕವರೇ ಈ ಸಲ್ಮಾನ್…! ಈ ಚಿತ್ರದಲ್ಲಿ ಛಾನ್ಸ್ ಸಿಕ್ಕಿದ ಬಳಿಕ ಸಲ್ಲೂ ತುಂಬಾ ಖುಷಿಯಿಂದಲೇ ಸ್ಟೈಲ್ ಆಗಿ, ಅಷ್ಟೇ ಸ್ಪೀಡ್ ಆಗಿ ಆಡಿಷನ್​ಗೆ ಹೋಗಿದ್ದರು. ಇತ್ತೀಚಿನವರೆಗೂ ಅವರು ತಮ್ಮ ಪರ್ಸನಾಲಿಟಿ ಕಾರಣಕ್ಕೇ ತನಗೆ ಛಾನ್ಸ್ ಸಿಕ್ಕಿತ್ತು ಎಂದೇ ನಂಬಿದ್ದರು. ಆದರೆ, ಛಾನ್ಸ್ ಸಿಕ್ಕ ಅಸಲಿ ಕಾರಣ ಯಾರೂ ಪಾತ್ರವನ್ನು ಒಪ್ಪದೇ ಇದ್ದದ್ದೇ ಆಗಿತ್ತು…!

About sudina

Check Also

ಟೆರರಿಸ್ಟ್ ಅಂತ ಸುನಿಲ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದ ಅಮೇರಿಕಾ ಪೊಲೀಸ್…!

ಯಾರಿಗಾದರೂ ಅಮೇರಿಕಾ ಪ್ರವಾಸ ಮಾಡೋದು ಅಂದರೆ ಅದೊಂದು ಹೆಮ್ಮೆ… ಇದರಲ್ಲಿ ಬಾಲಿವುಡ್ ಕಲಾವಿದರೂ ಹೊರತಾಗಿಲ್ಲ. ಆದ್ರೆ, ಹೀಗೆ ಅಮೇರಿಕಾಕ್ಕೆ ಹೋದಾಗ …

error: Content is protected !!