Monday , September 24 2018
ಕೇಳ್ರಪ್ಪೋ ಕೇಳಿ
Home / Gossip / ತಾಯ್ತನದ ಖುಷಿಯಲ್ಲಿ ಸಾನಿಯಾ ಮಿರ್ಜಾ… : ಅಕ್ಟೋಬರ್ ಗೆ ಮನೆಗೆ ಹೊಸ ಅತಿಥಿ…

ತಾಯ್ತನದ ಖುಷಿಯಲ್ಲಿ ಸಾನಿಯಾ ಮಿರ್ಜಾ… : ಅಕ್ಟೋಬರ್ ಗೆ ಮನೆಗೆ ಹೊಸ ಅತಿಥಿ…

ಹೈದರಾಬಾದ್ : ಟೆನಿಸ್ ತಾರೆ ಸಾನಿಯಾ ಮಿರ್ಜಾ ಖ್ಯಾತಿಯಲ್ಲಿ ಯಾವುದೇ ಬಾಲಿವುಡ್ ತಾರೆಗಿಂತ ಕಡಿಮೆ ಇಲ್ಲ. ತನ್ನ ಪ್ರತಿಭೆಯ ಮೂಲಕವೇ ಹಲವು ಪ್ರಶಸ್ತಿ ಗೌರವಕ್ಕೆ ಮುತ್ತಿಟ್ಟಿರೋ ಹೈದರಾಬಾದ್‍ನ ಈ ಸುಂದರಿ ಈಗ ಬದುಕಿನ ಮತ್ತೊಂದು ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಅದೇ ತಾಯ್ತನದ ಖುಷಿ. ಇದನ್ನು ಸ್ವತಃ ಸಾನಿಯಾ ಸ್ಪಷ್ಟಪಡಿಸಿದ್ದು, ಇದೇ ವರ್ಷದ ಅಕ್ಟೋಬರ್ ವೇಳೆಗೆ ಸಾನಿಯಾ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ.


ಈ ಬಗ್ಗೆ ತಮ್ಮ ಇನ್ಸ್‍ಸ್ಟ್ರಾಗ್ರಾಂನಲ್ಲಿ ಹಾಕಿಕೊಂಡಿರುವ ಸಾನಿಯಾ ಖುಷಿ ವ್ಯಕ್ತಪಡಿಸಿದ್ದಾರೆ. 2010ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್ ಮಲ್ಲಿಕ್‍ರನ್ನು ಸಾನಿಯಾ ಪ್ರೀತಿಸಿ ಮದುವೆಯಾಗಿದ್ದರು. ಸದ್ಯ ಈ ದಂಪತಿ ದುಬೈನಲ್ಲಿ ವಾಸವಾಗಿದ್ದಾರೆ.

About sudina

Check Also

ನ್ಯೂಯಾರ್ಕ್​ನಲ್ಲಿ ಪೇಮ ಪತಂಗಗಳ ಸುತ್ತಾಟ…

ನ್ಯೂಯಾರ್ಕ್ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಗಾಯಕ ನಿಕ್ ಜೊನಾಸ್ ನಡುವೆ ಪ್ರೀತಿ ಪ್ರೇಮದಂತಹ ಸುಂದರ …

Leave a Reply

Your email address will not be published. Required fields are marked *

error: Content is protected !!